ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಪ್ರಕಟ

ಈ ಸುದ್ದಿಯನ್ನು ಶೇರ್ ಮಾಡಿ

Team-India

ನವದೆಹಲಿ ನ.02:  ನವೆಂಬರ್ 9ರಿಂದ ರಾಜ್ ಕೋಟ್ ನಲ್ಲಿ ಆರಂಭವಾಗಲಿರುವ ಭಾರತ , ಇಂಗ್ಲೆಂಡ್ ನಡುವಿನ ಮೊದಲ 2 ಟೆಸ್ಟ್ ಸರಣಿಗೆ ಬಿಸಿಸಿಐ ಎಂಎಸ್ಕೆ ಪ್ರಸಾದ್ ಅಧ್ಯಕ್ಷತೆಯ ಆಯ್ಕೆ ಸಮಿತಿ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿದೆ. ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಅವರನ್ನು ಕೈಬಿಟ್ಟು, ಗಂಭೀರ್ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಗೆ ಅವಕಾಶ ನೀಡಲಾಗಿದೆ. 23ರ ಪ್ರಾಯದ ಪಾಂಡ್ಯ ಈ ವರ್ಷ ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್ನಲ್ಲಿ ಚೊಚ್ಚಲ ಪಂದ್ಯ ಆಡಿದ್ದು, ಇದೇ ಮೊದಲ ಬಾರಿ ಟೆಸ್ಟ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಬರೋಡಾದ ಆಲ್ರೌಂಡರ್ 16 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 727 ರನ್ ಗಳಿಸಿದ್ದು, ಒಟ್ಟು 22 ವಿಕೆಟ್ ಪಡೆದಿದ್ದಾರೆ.

ನ್ಯೂಝಿಲೆಂಡ್ ವಿರುದ್ಧ ಟೆಸ್ಟ್ ಸರಣಿಯ ವೇಳೆ ಇಶಾಂತ್ ಶರ್ಮ ಹಾಗೂ ಶಿಖರ್ ಧವನ್ ಬದಲಿಗೆ ತಂಡವನ್ನು ಸೇರಿಕೊಂಡಿದ್ದ ಹರ್ಯಾಣದ ಆಲ್ರೌಂಡರ್ ಜಯಂತ್ ಯಾದವ್ ಹಾಗೂ ಕರ್ನಾಟಕದ ಬ್ಯಾಟ್ಸ್ಮನ್ ಕರುಣ್ ನಾಯರ್ ತಂಡದಲ್ಲಿ ಸ್ಥಾನ ಕಾಯ್ದುಕೊಂಡಿದ್ದಾರೆ. ಜ್ವರದಿಂದ ಹೊರಗುಳಿದಿದ್ದ ವೇಗದ ಬೌಲರ್ ಇಶಾಂತ್ ಶರ್ಮ ತಂಡಕ್ಕೆ ವಾಪಸಾಗಿದ್ದಾರೆ. ಇನ್ನೋರ್ವ ವೇಗಿ ಭುವನೇಶ್ವರ ಕುಮಾರ್ ಫಿಟ್ನೆಸ್ ಸಾಬೀತು ಪಡಿಸಲು ವಿಫಲರಾಗಿದ್ದಾರೆ.

ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ನ.9 ರಂದು ರಾಜ್ಕೋಟ್ನಲ್ಲಿ ಆರಂಭವಾಗಲಿದ್ದು, ವಿಶಾಖಪಟ್ಟಣ(ನ.17-21), ಮೊಹಾಲಿ(ನ.26-30), ಮುಂಬೈ(ಡಿ.8-12) ಹಾಗೂ ಚೆನ್ನೈನಲ್ಲಿ(ಡಿ.16-20) ಉಳಿದ ಪಂದ್ಯಗಳು ನಡೆಯುತ್ತವೆ.

ಭಾರತ ತಂಡ:
ವಿರಾಟ್ ಕೊಹ್ಲಿ(ನಾಯಕ)
ಆರ್.ಅಶ್ವಿನ್
ರವೀಂದ್ರ ಜಡೇಜ
ಅಮಿತ್ ಮಿಶ್ರಾ
ಚೇತೇಶ್ವರ ಪೂಜಾರ
ಅಜಿಂಕ್ಯ ರಹಾನೆ
ಕರುಣ್ ನಾಯರ್
ವೃದ್ದಿಮಾನ್ ಸಹಾ(ವಿಕೆಟ್ಕೀಪರ್)
ಇಶಾಂತ್ ಶರ್ಮ
ಮುರಳಿ ವಿಜಯ್
ಉಮೇಶ್ ಯಾದವ್
ಮುಹಮ್ಮದ್ ಶಮಿ
ಹಾರ್ದಿಕ್ ಪಾಂಡ್ಯ
ಜಯಂತ್ ಯಾದವ್

► Follow us on –  Facebook / Twitter  / Google+

Facebook Comments

Sri Raghav

Admin