ಇಂಜಿನಿಯರಿಂಗ್ ಕಾಲೇಜು ನಿರ್ಮಾಣಕ್ಕೆ 26 ಕೋಟಿ- ಸಿ.ಟಿ. ರವಿ
ಚಿಕ್ಕಮಗಳೂರು, ನ.29- ಜಿಲ್ಲಾ ಕೇಂದ್ರವಾದ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಚಿಕ್ಕಮಗಳೂರು ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ನಿರ್ಮಾಣಕ್ಕೆ ಕೇಂದ್ರ ನಬಾರ್ಡ್ ಯೋಜನೆಯಿಂದ 26 ಕೋಟಿ ರೂ. ಹಾಗೂ ಚಿಕ್ಕಮಗಳೂರು ತಾಲ್ಲೂಕಿನ ಆಲ್ದೂರಿನ ಸರ್ಕಾರಿ ಪಾಲಿಟೆಕ್ನಿಕ್ ನಿರ್ಮಾಣಕ್ಕೂ ಕೂಡಾ 8 ಕೋಟಿ ರೂ. ಕೇಂದ್ರ ನಬಾರ್ಡ್ ಯೋಜನೆಯಿಂದ ಮಂಜೂರಾಗಿರುವುದಕ್ಕೆ ಶಾಸಕ ಸಿ.ಟಿ. ರವಿಯವರು ಹರ್ಷ ವ್ಯಕ್ತಪಡಿಸಿರುತ್ತಾರೆ. ಸಿ.ಟಿ. ರವಿಯವರು ಈ ಹಿಂದೆ ಉನ್ನತ ಶಿಕ್ಷಣ ಸಚಿವರಾಗಿದ್ದಾಗ ಚಿಕ್ಕಮಗಳೂರಿನ ಇಂಜಿನಿಯರಿಂಗ್ ಕಾಲೇಜು ಹಾಗೂ ಆಲ್ದೂರಿನ ಪಾಲಿಟೆಕ್ನಿಕ್ ಕಾಲೇಜು ಮಂಜೂರಾಗಿದ್ದು ಉನ್ನತ ಶಿಕ್ಷಣ ಸಚಿವರಾಗಿದ್ದಾಗಲೇ ಹಣ ಬಿಡುಗಡೆಯಾಗಬೇಕಾಗಿದ್ದು ವಿ.ಟಿ.ಯು.ನ ಬ್ಯಾಂಕಿನ ಖಾತೆಯನ್ನು ಆದಾಯ ತೆರಿಗೆ ಇಲಾಖೆಯು ಸ್ಥಗಿತಗೊಳಿಸಿರುವ ತಾಂತ್ರಿಕ ತೊಂದರೆಯಿಂದ ಹಣ ಬಿಡುಗಡೆಗೆ ವಿಳಂಬವಾಗಿತ್ತು.ಈ ತಾಂತ್ರಿಕ ತೊಂದರೆ ಇದೀಗ ನಿವಾರಣೆಯಾಗಿದ್ದು ಚಿಕ್ಕಮಗಳೂರಿನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಹಾಗೂ ಆಲ್ದೂರಿನ ಪಾಲಿಟೆಕ್ನಿಕ್ ಕಾಲೇಜು ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿದ್ದು ಸದ್ಯದಲ್ಲೇ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಶಾಸಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… : Eesanje News 24/7 ನ್ಯೂಸ್ ಆ್ಯಪ್ – Click Here to Download