ಭಾರತ -ಪಾಕ್ ಪಂದ್ಯದ ವೇಳೆ ವಿಜಯ್ ಮಲ್ಯ ಪ್ರತ್ಯಕ್ಷ

ಈ ಸುದ್ದಿಯನ್ನು ಶೇರ್ ಮಾಡಿ

Vijay-Malya

ಬರ್ಮಿಂಗ್‍ಹ್ಯಾಂ, ಜೂ5-ಭಾರತದ ಬ್ಯಾಂಕ್‍ಗಳಿಗೆ 9,000 ಕೋಟಿ ರೂಪಾಯಿ ವಂಚಿಸಿ ಬ್ರಿಟನ್‍ಗೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯಾ ಕೊನೆಗೂ ಪತ್ತೆಯಾಗಿದ್ದಾರೆ. ಇಂದು ಬರ್ಮಿಂಗ್ಹ್ಯಾಮ್ ನಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಪಿಯ ಭಾರತ – ಪಾಕ್ ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ ಎಂದು ನ್ಯೂಸ್ ಎಕ್ಸ್ ಸುದ್ದಿ ಮಾಧ್ಯಮ ವರದಿ ಮಾಡಿದೆ. ಇವರು ವೀಕ್ಷಿಸುತ್ತಿದ್ದ ಸಂದರ್ಭದಲ್ಲಿಯೇ ಭಾರತದ ಖ್ಯಾತ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಕೂಡ ಇದ್ದರು ಎಂಬುದು ವಿಶೇಷ. ಅಂದಹಾಗೆ ಮಲ್ಯ ಕಾಣಲು ಸಿಕ್ಕಿದ್ದು ಭಾರತದಲ್ಲಲ್ಲ. ಬದಲಾಗಿ, ಬರ್ಮಿಂಗ್ ಹ್ಯಾಂನ ಎಡ್ಜ್ ಬ್ಯಾಸ್ಟನ್ ಕ್ರಿಕೆಟ್ ಮೈದಾನದ ಸ್ಟೇಡಿಯಂನಲ್ಲಿ.ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯ ಎಡ್ಜ್ ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದಿದ್ದು, ಪಂದ್ಯಾವಳಿ ವೀಕ್ಷಿಸಲು ಮಲ್ಯ ಹಾಜರಾಗಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಭಾರತದ ಬ್ಯಾಂಕ್‍ಗಳಿಗೆ ಸುಮಾರು 6,963 ಕೋಟಿ (ಬಡ್ಡಿ ಸಹಿತ 9,000) ಸಾಲ ಬಾಕಿಯಿರಿಸಿರುವ ಮಲ್ಯ ಬ್ರಿಟನ್ ಗೆ ಪರಾರಿಯಾಗಿದ್ದರು.

ಇಂಡಿಯನ್‍ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲೀಕರಾಗಿ ಮಿಂಚಿದ್ದ ಮಲ್ಯ ಈಗ ಇಂಗ್ಲೆಂಡ್ ನಲ್ಲಿ ನೆಲೆಸಿದ್ದಾರೆ. ಅವರಿಂದ ಸಾಲ ವಸೂಲಿಗೆ ಬ್ಯಾಂಕ್ ಗಳು ಮುಗಿಬಿದ್ದಿವೆ. ತನಿಖಾ ಸಂಸ್ಥೆಗಳು ಬಂಧನಕ್ಕೆ ಬಲೆ ಬೀಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin