ಇಂಡೋನೆಷ್ಯಾ ದೋಣಿ ದುರಂತ : 20 ಮಂದಿ ಜಲಸಮಾಧಿ, 39 ಜನರ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Indonasia

ಜಕಾರ್ತ, ನ.3- ಪ್ರತಿಕೂಲ ಹವಾಮಾನದಿಂದಾಗಿ ದೋಣಿಯೊಂದು ಮುಳುಗಿ ಕನಿಷ್ಠ 20 ಮಂದಿ ಜಲಸಮಾಧಿಯಾಗಿರುವ ದುರಂತ ಇಂಡೋನೆಷ್ಯಾದ ಬತಾಮ್ ದ್ವೀಪದ ಸಾಗರಪ್ರದೇಶದಲ್ಲಿ ಸಂಭವಿಸಿದೆ.  ಇಂಡೋನೆಷ್ಯಾ ಕಾರ್ಮಿಕರೂ ಸೇರಿದಂತೆ 90 ಪ್ರಯಾಣಿಕರಿದ್ದ ಸ್ಪೀಡ್ ಬೋಟ್ ಮಲೇಷ್ಯಾದ ಜೋಹಾರ್ ಬರುವಿನಿಂದ ಹೊರಟ ಎರಡು ಗಂಟೆಗಳ ನಂತರ ನಿನ್ನೆ ಭಾರೀ ಮಳೆ ಮತ್ತು ಬಿರುಗಾಳಿಗೆ ಸಿಲುಕಿ ನೀರುಪಾಲಾಯಿತು.  ಈ ದುರಂತದಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿದ್ದು, ಈವರೆಗೆ 39 ಜನರನ್ನು ರಕ್ಷಿಸಲಾಗಿದೆ. ಒಂದು ಹೆಲಿಕಾಪ್ಟರ್ ಮತ್ತು ಅನೇಕ ದೋಣಿಗಳ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಯಿತು ಎಂದು ಪೊಲೀಸ್ ಮುಖ್ಯಸ್ಥ ಸಂಬುಡಿ ಗುಸ್‍ಡಿಯಾನ್ ಹೇಳಿದ್ದಾರೆ.

ದೋಣಿ ಅಗತ್ಯಕ್ಕಿಂತ ಹೆಚ್ಚು ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿದ್ದರಿಂದಲೇ ಈ ದುರಂತ ಸಂಭವಿಸಿದೆ ಎಂದು ಪಾರಾದವರು ತಿಳಿಸಿದ್ದಾರೆ.  ಸುಲಾವೇಸಿ ದ್ವೀಪದಲ್ಲಿ 2009ರಲ್ಲಿ ಸಂಭವಿಸಿದ ಭೀಕರ ದೋಣಿ ದುರಂತದಲ್ಲಿ 330ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin