ಇಂಡೋನೇಷಿಯಾ ಪ್ರಯಾಣಕ್ಕೆ ಈ ಸೌದಿದೊರೆ ಕೊಂಡೊಯ್ದ ಲಗೇಜ್ ತೂಕ ಕೇಳಿದರೆ ನಿಮ್ಮ ತಲೆ ತಿರುಗುತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

Soudi-King

ಜಕಾರ್ತ, ಫೆ.28- ಲೆಸ್ ಲಗೇಜ್ ಮೋರ್ ಕಂಫರ್ಟ್ ಎಂಬುದು ಸುಖಕರ ಪಯಣಕ್ಕಾಗಿ ಇರುವ ಜನಪ್ರಿಯ ನಾಣ್ನುಡಿ. ಆದರೆ ದ್ವೀಪರಾಷ್ಟ್ರ ಇಂಡೋನೆಷ್ಯಾಗೆ ಪ್ರವಾಸ ಕೈಗೊಳ್ಳುವ ಸೌರಿ ಅರೇಬಿಯಾ ದೊರೆಯ ವಿಮಾನಯಾನದ ಲಗೇಜ್ ತೂಕ ಕೇಳಿದರೆ ನೀವು ಅಚ್ಚರಿಗೊಳ್ಳುತ್ತೀರಿ. ಈ ದೊರೆಯ ಸಾಮಾನು-ಸರಂಜಾಮುವಿನ ತೂಕ 506 ಟನ್‍ಗಳು (5,06,000 ಕೆಜಿಗಳು)  ದೊರೆಯೊಂದಿಗೆ ಬೃಹತ್ ಲಗೇಜ್‍ನೊಂದಿಗೆ 10 ಸಚಿವರು, 25 ರಾಜಕುಮಾರರು, 100 ಮಂದಿ ಭದ್ರತಾ ಸಿಬ್ಬಂದಿ ಸೇರಿದಂತೆ ಕನಿಷ್ಠ 1,500 ಜನರ ದೊಡ್ಡ ಪರಿವಾರವೂ ತೆರಳಲಿದೆ.
ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಜಿಜ್ ಅಲ್-ಸೌದ್ ಒಂಭತ್ತು ದಿನಗಳ ಇಂಡೋನೆಷ್ಯಾ ಪ್ರವಾಸ ಕೈಗೊಳ್ಳುತ್ತಿದ್ದಾರೆ. 46 ವರ್ಷಗಳ ಇತಿಹಾಸದಲ್ಲಿ ಸೌದಿ ದೊರೆಯೊಬ್ಬರು ದ್ವೀಪರಾಷ್ಟ್ರಕ್ಕೆ ತೆರಳುತ್ತಿರುವುದು ಇದೇ ಮೊದಲು. ಉಭಯ ದೇಶಗಳ ನಡುವೆ ಆರ್ಥಿಕ ಬಾಂಧವ್ಯ ಬಲವರ್ಧನೆಯಲ್ಲಿ ಈ ಭೇಟಿ ಮಹತ್ವದ ಪಾತ್ರ ವಹಿಸಲಿದೆ.

ಆದರೆ ಸಲ್ಮಾನ್ ನವದಿನಗಳ ವಿದೇಶಿ ಪ್ರವಾಸಕ್ಕಾಗಿ ಭಾರೀ ತಯಾರಿ ನಡೆಸಿದ್ದಾರೆ. ಇಂಡೋನೆಷ್ಯಾ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ, ದೊರೆ 459 ಮೆಟ್ರಿಕ್ ಟನ್‍ಗಳ (506 ಟನ್‍ಗಳು) ಲಗೇಜ್ ತಮ್ಮೊಂದಿಗೆ ಕೊಂಡೊಯ್ಯಲಿದ್ದಾರೆ. ಇಷ್ಟೊಂದು ತೂಕದ ಸರಕಿನಲ್ಲಿ ಎರಡು ಮರ್ಸಿಡಿಸ್ ಬೆಂಜ್ ಎಸ್600 ಲೈಮೋ ಕಾರುಗಳು ಮತ್ತು ಎರಡು ವಿದ್ಯುತ್ ಎಲಿವೇಟರ್‍ಗಳೂ ಇವೆ !   ದೊರೆಯ ಸಾಮಾನು-ಸರಂಜಾಮುಗಳನ್ನು ನೋಡಿ ತಲೆ ಬಿಸಿ ಮಾಡಿಕೊಂಡಿರುವ ಸರಕು ಸಾಗಣೆ ವಿಮಾನ ಸಂಸ್ಥೆ ಪಿಟಿ ಜಾಸಾ ಅಂಗ್‍ಕಾಸಾ ಸಮೆಸ್ಟಾ (ಜೆಎಎಸ್) ಉನ್ನತಾಧಿಕಾರಿ ಅಡ್ಜಿ ಗುನಾವಾನ್ ಈ ಭಾರೀ ಲಗೇಜನ್ನು ನಿರ್ವಹಿಸಲು ಒಟ್ಟು 572 ನೌಕರರನ್ನು ನಿಯೋಜಿಸಿದ್ದಾರೆ.

ಸೌದಿ ದೊರೆ ವಿದೇಶಗಳಿಗೆ ಪ್ರಯಾಣಿಸುತ್ತಾರೆ ಎಂದರೆ ಒಂದು ಊರೇ ಅಲ್ಲಿಗೆ ತೆರಳಿದಂತಾಗುತ್ತದೆ. ಈ ಮಹಾನುಭಾವ 2015ರಲ್ಲಿ ಅಮೆರಿಕದ ವಾಷಿಂಗ್ಟನ್‍ಗೆ ಭೇಟಿ ನೀಡಿದ್ದರು. ಆಗ ಜಾರ್ಜ್‍ಟೌನ್ ಪಟ್ಟಣದ ಇಡೀ ನಾಲ್ಕು ಹೋಟೆಲ್‍ಗಳನ್ನು ದೊರೆಗಾಗಿಯೇ ಬುಕ್ ಮಾಡಲಾಗಿತ್ತು. ಈ ಹೋಟೆಲ್ 222 ಕೊಠಡಿಗಳನ್ನು ಹೊಂದಿದ್ದು ಅತ್ಯಂತ ದುಬಾರಿ ಮತ್ತು ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡಿದೆ. ಆಗ ದೊರೆಯೊಂದಿಗೆ ಭಾರೀ ಸರಕಿನೊಂದಿಗೆ ತೆರಳಿದ್ದ ರಾಜ ಪರಿವಾರದ ಸಂಖ್ಯೆ 1,000..!

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin