ಇಂಡೋನೇಷ್ಯಾದಲ್ಲಿ ವಿನಾಶಕಾರಿ ಪ್ರವಾಹ ಮತ್ತು ಭೂಕುಸಿತ : 26 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Indonesia
ಜಕಾರ್ತಾ, ಸೆ.23- ಇಂಡೋನೇಷ್ಯಾದಲ್ಲಿ ವಿನಾಶಕಾರಿ ಪ್ರವಾಹ ಮತ್ತು ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 26ಕ್ಕೇರಿದ್ದು, 19 ಮಂದಿ ನಾಪತ್ತೆಯಾಗಿದ್ದಾರೆ.ಇಂಡೋನೇಷ್ಯಾದ ಪ್ರಮುಖ ದ್ವೀಪ ಜಾವಾದ ಗುರತ್‍ನಲ್ಲಿ ನೆರೆ ಹಾವಳಿ ರೌದ್ರಾವತಾರಕ್ಕೆ ಹೆಚ್ಚು ಸಾವು-ನೋವು ಸಂಭವಿಸಿದೆ. ಕುಂಭದ್ರೋಣ ಮಳೆ ಯಿಂದಾಗಿ ಈ ಪ್ರಾಂತ್ಯ ತೀವ್ರ ಅತಂತ್ರಕ್ಕೆ ಸಿಲುಕಿದೆ.ಪ್ರವಾಹದ ನೀರು ಕಡಿಮೆಯಾಗುತ್ತಿದ್ದು, ಜಲಪ್ರಳಯದ ಭೀಕರತೆ ಅನಾವರಣಗೊಳ್ಳುತ್ತಿದೆ. ಅನೇಕ ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ವಾಹನಗಳು ಮತ್ತು ಮರಗಳು ಬುಡಮೇಲಾಗಿವೆ.
ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗುತ್ತಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin