ಇಂಡೋ-ಪಾಕ್ ಗಡಿಯಲ್ಲಿ ಇಬ್ಬರು ನುಸುಳುಕೋರರ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Firing-Border--01

ಅಮೃತಸರ, ಸೆ.30-ಕಾಶ್ಮೀರ ಕಣಿವೆಯ ಗಡಿಯೊಳಗೆ ನುಸುಳಲು ಯತ್ನಿಸಿದ ಉಗ್ರರು ಭಾರತೀಯ ಯೋಧರ ಗುಂಡಿಗೆ ಬಲಿಯಾಗುತ್ತಿರುವ ಬೆನ್ನಲ್ಲೇ ಪಂಜಾಬ್‍ನಲ್ಲೂ ಭಯೋತ್ಪಾದಕರ ಅತಿಕ್ರಮಣವನ್ನು ವಿಫಲಗೊಳಿಸಲಾಗಿದೆ. ಬಿಎಸ್‍ಎಫ್ ನಡೆಸಿದ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಇಬ್ಬರು ಶಸ್ತ್ರಸಜ್ಜಿತ ನುಸುಳುಕೋರರು ಹತರಾಗಿದ್ದಾರೆ.  ಪಂಜಾಬ್‍ನ ಅಮೃತಸರದ ಅಜ್ನಾಲಾ ಸೆಕ್ಟರ್‍ನಲ್ಲಿ ಸೆ.19-20ರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಗಡಿಯೊಳಗೆ ನುಸುಳಲು ಯತ್ನಿಸಿದ ಉಗ್ರರಿಗೆ ಬಿಎಸ್‍ಎಫ್ ಯೋಧರು ಎಚ್ಚರಿಕೆ ನೀಡಿದರು. ಆದರೂ ಭಯೋತ್ಪಾದಕರು ದುಸ್ಸಾಹಸಕ್ಕೆ ಮುಂದಾಗಿ ಯೋಧರ ಮೇಲೆ ಗುಂಡು ಹಾರಿಸಿದರು. ಆಗ ನಡೆದ ಎನ್‍ಕೌಂಟರ್‍ನಲ್ಲಿ ಇಬ್ಬರು ಪಾಕ್ ನುಸುಳುಕೋರರು ಬಲಿಯಾದರು. ಹತ ಉಗ್ರರಿಂದ ಎಕೆ-47 ರೈಫಲ್‍ಗಳು, ಒಂದು ಪಿಸ್ತೂಲ್, 24 ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಗಡಿ ಭಾಗದಲ್ಲಿ ಕಟ್ಟೆಚ್ಚರ :

23 ಯೋಧರನ್ನು ಉಗ್ರರು ಬಲಿ ತೆಗೆದುಕೊಂಡ ಉರಿ ಸೇನಾ ಶಿಬಿರದ ಮೇಲಿನ ದಾಳಿಗೆ ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಕಾಶ್ಮೀರ ಸೇರಿದಂತೆ ಗಡಿ ಭಾಗದ ರಾಜ್ಯಗಳಲ್ಲಿ ಮತ್ತೆ ಭಯೋತ್ಪಾದಕರು ಆಕ್ರಮಣ ನಡೆಸುವ ಸಾಧ್ಯತೆ ಇರುವುದರಿಂದ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

Facebook Comments

Sri Raghav

Admin