ಇಂದಿನಿಂದಲೇ ಕಡಲೆ ಖರೀದಿ ಆರಂಭ : ಕೃಷ್ಣ ಭೈರೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

Krishanbyregowda
ಬೆಂಗಳೂರು, ಫೆ.8- ಕಡಲೆ ಖರೀದಿ ಕೇಂದ್ರಗಳನ್ನು ಇಂದಿನಿಂದಲೇ ಆರಂಭಿಸುವುದಾಗಿ ಕೃಷಿ ಸಚಿವ ಕೃಷ್ಣಬೈರೇಗೌಡ ವಿಧಾನಸಭೆಯಲ್ಲಿಂದು ತಿಳಿಸಿದರು.
ವಿಧಾನಭೆಯ ಶೂನ್ಯವೇಳೆಯಲ್ಲಿ ಉತ್ತರ ನೀಡಿದ ಸಚಿವರು, ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು ಬೆಂಬಲಬೆಲೆಯಡಿ ಕಡಲೆ ಖರೀದಿಗೆ ನಿರ್ಧರಿಸಲಾಗಿದೆ. ಈಗಾಗಲೇ ನೋಂದಣಿ ಕಾರ್ಯ ನಡೆಯುತ್ತಿದ್ದು, ಫೆ.23ರವರೆಗೂ ನೋಂದಣಿಗೆ ಅಕವಾಶವಿದೆ. ಆದರೆ, ಆರಂಭದಲ್ಲಿ ನೋಂದಣಿ ನಿದಾನಗತಿಯಲ್ಲಿ ನಡೆಯುತ್ತಿದೆ. ಕೇಂದ್ರ ಸರ್ಕಾರ ರಾಜ್ಯದಲ್ಲಿ 20 ಲಕ್ಷ ಕ್ವಿಂಟಾಲ್ ತೊಗರಿ ಖರೀದಿಗೆ ಮಾತ್ರ ಅವಕಾಶ ನೀಡಿದೆ ಎಂದರು.

ಈ ಸಂದರ್ಭದಲ್ಲಿ ಆಡಳಿತ, ಪ್ರತಿ ಪಕ್ಷ ಎಂಬ ಭೇದವಿಲ್ಲದ ಎಲ್ಲಾ ಶಾಸಕರು ಚರ್ಚೆಯಲ್ಲಿ ಭಾಗವಹಿಸಿ ಕಡಲೆಗೆ ನಿಗದಿಪಡಿಸಿರುವ ಬೆಂಬಲ ಬೆಲೆಯನ್ನು ಹೆಚ್ಚಿಸಬೇಕು. ಸುಮಾರು 80 ಕ್ವಿಂಟಾಲ್ ಕಡಲೆ ಬೆಳೆಯಾಗಿರುವುದರಿಂದ 20 ಲಕ್ಷ ಕ್ವಿಂಟಾಲ್ ಅಷ್ಟೇ ಖರೀದಿಸಿದರೆ ಉಳಿದವರಿಗೆ ಅನ್ಯಾಯವಾಗಲಿದೆ.
ಕನಿಷ್ಠ 50ಲಕ್ಷ ಕ್ವಿಂಟಾಲ್ ಖರೀದಿ ಮಾಡಬೇಕು. ಬ್ಯಾಂಕ್ ಖಾತೆ ಕಡ್ಡಾಯ, ಪಹಣಿ ಕಡ್ಡಾಯ ಎಂಬ ಷರತ್ತುಗಳನ್ನು ಸಡಿಲಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಆಡಳಿತ ಪಕ್ಷದ ಬಸವರಾಜ್ ಯಾವಗಲ್, ಪರಮೇಶ್ವರ್‍ನಾಯಕ್, ಸಚಿವ ವಿನಯ್‍ಕುಲಕರ್ಣಿ, ಬಿಜೆಪಿಯ ಲಕ್ಷ್ಮಣ್ ಸವದಿ, ಜೆಡಿಎಸ್‍ನ ಕೋನರೆಡ್ಡಿ, ರೈತ ಸಂಘದ ಪುಟ್ಟಣ್ಣಯ್ಯ ಮತ್ತಿತರರು ಪಕ್ಷ ಭೇದ ಮರೆತು ಚರ್ಚೆಯಲ್ಲಿ ಭಾಗವಹಿಸಿ ಹೆಚ್ಚು ಕಡಲೆಯನ್ನು ಖರೀದಿ ಮಾಡಬೇಕು. ರೈತರಿಗೆ ನೆರವಾಗಬೇಕು. ಅಗತ್ಯ ಇರುವೆಡೆ ಖರೀದಿ ಕೇಂದ್ರಗಳನ್ನು ಆರಂಭಿಸಬೇಕೆಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ನಮಗೆ ಅನುದಾನದ ಕೊರತೆ ಇಲ್ಲ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಖರೀದಿ ಕೇಂದ್ರ ಆರಂಭಿಸುತ್ತಿರುವುದರಿಂದ ಖರೀದಿಯ ಪ್ರಮಾಣವನ್ನು ಹೆಚ್ಚಿಸಲು ಕೇಂದ್ರದ ಅನುಮತಿ ಅಗತ್ಯವಿದೆ. ಅಲ್ಲಿಂದ ಅನುಮತಿ ಪಡೆದ ನಂತರ ಖರೀದಿ ಮಿತಿ ಹೆಚ್ಚಿಸಲಾಗುವುದು. ಪಹಣಿ ಕಡ್ಡಾಯ ಎಂಬ ನಿಯಮವನ್ನು ಸಡಿಲಿಸಲಾಗಿದೆ. ಬ್ಯಾಂಕ್ ಖಾತೆ ನಿಯಮವನ್ನು ಸಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

Facebook Comments

Sri Raghav

Admin