ಇಂದಿನಿಂದ ಕೆಆರ್’ಎಸ್ ಅಚ್ಚುಕಟ್ಟು ವ್ಯಾಪ್ತಿಯ ಪ್ರದೇಶಗಳ ಬೆಳೆಗಳಿಗೆ ನೀರು ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

Kaveri

ಮಂಡ್ಯ,ಅ.24- ಕೆ ಆರ್ ಎಸ್ ಅಚ್ಚುಕಟ್ಟು ವ್ಯಾಪ್ತಿಗೆ ಬರುವ ಎಲ್ಲಾ ಬೆಳೆಗಳಿಗೆ  ಇಂದಿನಿಂದ ನಾಲೆಗಳಿಂದ ನೀರು ಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಮತ್ತು ವಸತಿ ಸಚಿವ ಎಂ ಕೃಷ್ಣಪ್ಪ ಇಂದಿಲ್ಲಿ ತಿಳಿಸಿದರು . ನಗರದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಳೆದ 14 ರಿಂದ ನಾಲೆಗಳಿಂದ ನೀರು ಹರಿಸುವುದನ್ನು ನಿಲ್ಲಿಸಲಾಗಿತ್ತು. ಆದರೆ ಸಧ್ಯದ ಸ್ಥಿತಿಯಲ್ಲಿ ಮಳೆಯಿಲ್ಲದೆ ಬೆಳೆಗಳು ಒಣಗುತ್ತಿರುವುದರಿಂದ 3.3 ಟಿ ಎಂ ಸಿ ನೀರನ್ನು ಎರಡು ಕಂತುಗಳಲ್ಲಿ ಹರಿಸಲಾಗುವುದು ಎಂದರು .  ಇವತ್ತಿನಿಂದ 8 ರಿಂದ 10 ದಿನಗಳ ಕಾಲ ನೀರು ಹರಿಸಲಾಗುವುದು . ನಂತರ ಸ್ವಲ್ಪ ದಿನಗಳು ನಿಲ್ಲಸಿ ಆಮೇಲೆ ಎರಡನೇ ಕಂತಿನಲ್ಲಿ ಇನ್ನುಳಿದ ನೀರನ್ನು ಹರಿಸಲಾಗುತ್ತದೆ ಎಂದ ಅವರು ವಿಶ್ವೇಶ್ವರ ನಾಲೆಯ ಕೊನೆಯ ಪ್ರದೇಶದ ಬೆಳೆಗಳಿಗೆ ನೀರು ತಲುಪಿಲ್ಲ ಎಂದು ದೂರು ಬಂದರೆ ಬೆಳೆ ನಷ್ಟ ಪರಿಹಾರ ನೀಡಲಾಗುವುದು ಎಂದು ಅವರು ಹೇಳಿದರು .

ಈಗಾಗಲೆ ಜಿಲ್ಲೆಯ 7 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿತವಾಗಿರುವ ಹಿನ್ನಲೆಯಲ್ಲಿ 1.90 ಲಕ್ಷ ಎಕರೆ ಪ್ರದೇಶಗಳಲ್ಲಿ ಬೆಳೆ ನಷ್ಟ ವಾಗಿರುವ ಬಗ್ಗೆ ಅಂದಾಜು ಮಾಡಲಾಗಿದೆ ಎಂದು ತಿಳಿಸಿದರು . ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿಯಿಂದ ಕೃಷಿ ,ಕಂದಾಯ , ನೀರಾವರಿ ಇಲಾಖೆಗಳಿಂದ ಜಂಟಿ ಆಶ್ರಯದಲ್ಲಿ ಸಮೀಕ್ಷೆ ನಡೆಸಿ ವರದಿ ಬಂದ ನಂತರ ಪರಿಹಾರ ವಿತರಣೆ ಕಾರ್ಯ ಆರಂಭವಾಗಲಿದೆ ಎಂದರು . ಸುದ್ದಿಗೋಷ್ಟಿಯಲ್ಲಿ ಜಿಲ್ಲಾಧಿಕಾರಿ ಜಿಯಾವುಲ್ಲಾ ,ಕಾಂಗ್ರೇಸ್ ಜಿಲ್ಲಾಧ್ಯಕ್ಷ ಆತ್ಮಾನಂದ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .

► Follow us on –  Facebook / Twitter  / Google+

Facebook Comments

Sri Raghav

Admin