ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-11-2016)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : 

ಅಪಾರವಾದ ಕಾವ್ಯಜಗತ್ತಿನಲ್ಲಿ ಕವಿಯೊಬ್ಬನೇ ಸೃಷ್ಟಿಕರ್ತನಾದ ಬ್ರಹ್ಮ. ಅವನಿಗೆ ಹೇಗೆ ರುಚಿಸುವುದೋ ಹಾಗೆ ಈ ವಿಶ್ವವು ಪರಿವರ್ತನೆಗೊಳ್ಳುತ್ತದೆ.

Rashi x1

ಪಂಚಾಂಗ : ಭಾನುವಾರ, 27.11.2016

ಸೂರ್ಯ ಉದಯ ಬೆ.6.24 / ಸೂರ್ಯ ಅಸ್ತ ಸಂ.5.51
ಚಂದ್ರ ಉದಯ ಮ.3.50 /ಚಂದ್ರ ಅಸ್ತ ರಾ.4.30
ದುರ್ಮುಖಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು /ಕಾರ್ತಿಕ ಮಾಸ / ಕೃಷ್ಣ ಪಕ್ಷ /ತಿಥಿ: ತ್ರಯೋದಶಿ
(ಮ.12.47) /ನಕ್ಷತ್ರ: ಸ್ವಾತಿ (ಬೆ.6.05) /ಯೋಗ: ಶೋಭನ (ರಾ.3.32) /ಕರಣ: ವಣಿಜ್-ಭದ್ರೆ
(ಮ.12.47-ರಾ.2.05) / ಮಳೆ ನಕ್ಷತ್ರ:ಅನೂರಾಧ / ಮಾಸ: ವೃಶ್ಚಿಕ / ತೇದಿ: 12

ರಾಶಿ ಭವಿಷ್ಯ :

ಮೇಷ : ಬೆಲೆಬಾಳುವ ವಸ್ತುಗಳ ಕೊಂಡುಕೊಳ್ಳುವಿಕೆ ಯಲ್ಲಿ ಹೆಚ್ಚು ಆಸಕ್ತಿ ವಹಿಸುವಿರಿ, ದೂರ ಪ್ರಯಾಣ
ವೃಷಭ : ಆರೋಗ್ಯಭಾಗ್ಯ ವರ್ಧಿಸಲಿದೆ, ಅನುಕೂಲಕರ ದಿನ
ಮಿಥುನ: ಯೋಗ್ಯ ವಯಸ್ಕರಿಗೆ ಯೋಗ್ಯ ಪ್ರಸ್ತಾವಗಳು ಒದಗಿ ಬಂದರೂ ಹೆಚ್ಚಿನ ಪ್ರಯತ್ನಬಲದಿಂದ ಮುಂದುವರಿಯಿರಿ
ಕಟಕ: ದಾಯಾದಿಗಳ ಜತೆ ಭಿನ್ನಮತ, ಆಗಾಗ ಧನಾಗಮನ
ಸಿಂಹ : ದೇಹಾರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿರಿ
ಕನ್ಯಾ: ಗೃಹದ ಸಮಸ್ಯೆ ಬಗೆ ಹರಿದು ಸಮಾಧಾನವಾಗಲಿದೆ
ತುಲಾ: ಆಟೋಟಗಳಲ್ಲಿ ವಿದ್ಯಾರ್ಥಿ ಗಳ ಕೌಶಲ ಪ್ರಕಟವಾಗಲಿದೆ
ವೃಶ್ಚಿಕ : ತೈಲ, ಹಾಲು ವ್ಯಾಪಾರ ಏರುಗತಿ ಕಂಡೀತು, ಬಂಧುಗಳ ಸಮಾಗಮ ಸಂತಸ ತಂದೀತು
ಧನುಸ್ಸು: ಬಂಧುಗಳ ಸಂಬಂಧಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಿರಿ, ವಿದ್ಯಾರ್ಥಿಗಳಿಗೆ ಸಂತಸ ವಾರ್ತೆ
ಮಕರ : ಗೃಹ ನಿರ್ಮಾಣ ಕಾರ್ಯಭಾಗಗಳಲ್ಲಿ ಅನುಕೂಲ
ಕುಂಭ : ನೆರೆಹೊರೆಯವರ ಸಹಕಾರ, ಪ್ರೀತಿಯಿಂದ ಸಮಾಧಾನ
ಮೀನ: ಅನಾವಶ್ಯಕ ಸಂಚಾರದಿಂದ ಪರದಾಟವಿದೆ

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin