ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-11-2016)

ಈ ಸುದ್ದಿಯನ್ನು ಶೇರ್ ಮಾಡಿ

Rashi x1

ನಿತ್ಯ ನೀತಿ :

ಬೇಸಾಯ ಬಿಟ್ಟರೆ ಸುಖವಿಲ್ಲ. ಧರ್ಮ ದಿಂದ ನಡೆದುಕೊಂಡಲ್ಲಿ ಬೇಸಾಯ ಮಾಡುವವನಿಗೆ ಎಂದೂ ಅನ್ನ-ಬಟ್ಟೆಗೆ ಕೊರತೆ ಇರುವುದಿಲ್ಲ. -ಬೃಹತ್ ಪರಾಶರಸ್ಮೃತಿ

ಪಂಚಾಂಗ : ಮಂಗಳವಾರ, 08.11.2016

ಸೂರ್ಯ ಉದಯ ಬೆ.06.16 / ಸೂರ್ಯ ಅಸ್ತ ಸಂ.05.51
ಚಂದ್ರ ಉದಯ ಮ.12.56 / ಚಂದ್ರ ಅಸ್ತ ರಾ.12.57
ದುರ್ಮುಖಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಕಾರ್ತಿಕ ಮಾಸ /ಶುಕ್ಲ ಪಕ್ಷ /
ತಿಥಿ: ಅಷ್ಟಮಿ (ಮ.1.21) /ನಕ್ಷತ್ರ: ಧನಿಷ್ಠ (ರಾ.4.37)/ ಯೋಗ: ವೃದ್ಧಿ (ರಾ.11.46) /
ಕರಣ: ಭವ-ಬಾಲವ (ಮ.1.21-ರಾ.1.09) / ಮಳೆ ನಕ್ಷತ್ರ: ವಿಶಾಖ / ಮಾಸ: ತುಲಾ / ತೇದಿ: 23

ಪಂಚಾಂಗ : ಸೋಮವಾರ, 07.11.2016

ದುರ್ಮುಖಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಕಾರ್ತಿಕ ಮಾಸ /ಶುಕ್ಲ ಪಕ್ಷ /ತಿಥಿ: ಸಪ್ತಮಿ (ಮ.1.10) /ನಕ್ಷತ್ರ: ಶ್ರವಣ (ರಾ.4.18) / ಯೋಗ: ಗಂಡ (ರಾ.1.04) /ಕರಣ: ವಣಿಜ್-ಭದ್ರೆ (ಮ.1.10-ರಾ.1.21) /ಮಳೆ ನಕ್ಷತ್ರ: ವಿಶಾಖ / ಮಾಸ: ತುಲಾ / ತೇದಿ: 22

ರಾಶಿ ಭವಿಷ್ಯ :

ಮೇಷ : ಹಂತ ಹಂತವಾಗಿ ಹಿರಿಯರ ಆರೋಗ್ಯದಲ್ಲಿ ಸಮಾ ಧಾನ ಸಿಗಲಿದೆ, ಕಾರ್ಯನಿಮಿತ್ತ ಸಂಚಾರ, ಕಾರ್ಯಸಿದ್ಧಿ
ವೃಷಭ : ಹಿತೈಷಿಗಳ ಬಂಧು-ಮಿತ್ರರ ಸಹಕಾರ ಸಿಗುತ್ತದೆ
ಮಿಥುನ: ಬಹುದಿನಗಳ ಬಳಿಕ ಅನಿರೀಕ್ಷಿತ ಧನ ಸಂಪತ್ತು ಪ್ರಾಪ್ತಿಯಾಗಲಿದೆ, ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಆಸಕ್ತಿ
ಕಟಕ: ಸಣ್ಣ ಸಣ್ಣ ವಿಚಾರಗಳು ಮನಸ್ಸಿಗೆ ಕಿರಿಕಿರಿ ತಂದರೂ ನಿರ್ಲಕ್ಷಿಸುವುದು ಅಗತ್ಯವಿದೆ
ಸಿಂಹ: ಮಹಿಳೆಯರಿಗೆ ದ್ವಂದ್ವ ವಿಚಾರ ಗಳಿಂದ ಮಾನಸಿಕ ಅಸ್ಥಿರತೆ ಕಾಡುತ್ತದೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿರಿ
ಕನ್ಯಾ: ಅಭಿವೃದ್ಧಿ ಗೋಚರಕ್ಕೆ ಬಂದರೂ ಸಮಾಧಾನವಿರದು
ತುಲಾ: ಹಿತಶತ್ರುಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗದಿರಿ
ವೃಶ್ಚಿಕ : ಕೆಲಸ-ಕಾರ್ಯಗಳು ಹಂತ ಹಂತವಾಗಿ ನಡೆಯಲಿವೆ, ಸಂಚಾರದಲ್ಲಿ ಕಾರ್ಯಸಿದ್ಧಿ
ಧನುಸ್ಸು: ಕುಟುಂಬದವರ ಸಹಕಾರ ಉಪಯುಕ್ತವಾದೀತು
ಮಕರ: ರಾಜಕೀಯ ವರ್ಗದವರಿಗೆ ಅಸಮಾಧಾನ ಹೊಗೆಯಾಡಲಿದೆ, ಅನಿರೀಕ್ಷಿತ ಹಳೆ ಮಿತ್ರರ ಸಮಾಗಮ
ಕುಂಭ : ವ್ಯಾಪಾರ-ವಹಿವಾಟುಗಳು ಧನ ಸಂಗ್ರಹಕ್ಕೆ ಪೂರಕ
ಮೀನ: ಕೆಲಸ-ಕಾರ್ಯಗಳಲ್ಲಿ ಒತ್ತಡದಿಂದ ಆಯಾಸಕ್ಕೆ ಕಾರಣ

► Follow us on –  Facebook / Twitter  / Google+

Facebook Comments

Sri Raghav

Admin