ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-05-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ಎಲೈ ಕೊಕ್ಕರೆ! ನಿನಗೆ ಹಂಸವಾಗಬೇಕೆನ್ನುವ ಹಂಬಲವಿದೆ. ಆದರೆ ಅದಕ್ಕಾಗಿ ನೀನು ಏನೇನು ಮಾಡಬೇಕು ಗೊತ್ತೆ..! ಸರಸ್ವತಿ ಯೊಡನೆ ಸ್ನೇಹ ಬೆಳೆಸಬೇಕು. ಬ್ರಹ್ಮನನ್ನು ಬೆನ್ನಿನ ಮೇಲೆ ಹೊರಬೇಕು. ನಿನ್ನ ನಡಿಗೆಯಲ್ಲಿ ಕುಶಲತೆಯನ್ನು ತೋರಬೇಕು. ನಿನ್ನ ಅವಯವಗಳು ಸುಕ್ಕುಗಟ್ಟುತ್ತವೆ. ಕೂದಲು ಬೆಳ್ಳಗಾಗುತ್ತದೆ. ಮುಪ್ಪಿನಿಂದ ಮನುಷ್ಯನು ಜೀರ್ಣನಾಗುತ್ತಾನೆ. ಅದನ್ನು ತಡೆಯಲು ಯಾವ ಪ್ರಭಾವ ಅಲ್ಲಿ ನಡೆದೀತು..? -ಅನ್ಯೋಕ್ತಿಸ್ತಬಕ

Rashi

ಪಂಚಾಂಗ : 13.05.2018 ಭಾನುವಾರ

ಸೂರ್ಯ ಉದಯ ಬೆ.05.55 / ಸೂರ್ಯ ಅಸ್ತ ಸಂ.06.37
ಚಂದ್ರ ಉದಯ ರಾ.04.56 / ಚಂದ್ರ ಅಸ್ತ ಮ.04.43
ವಿಲಂಬಿ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ
ಕೃಷ್ಣ ಪಕ್ಷ / ತಿಥಿ : ತ್ರಯೋದಶಿ (ರಾ.09.46) / ನಕ್ಷತ್ರ: ರೇವತಿ (ಮ.01.31)
ಯೋಗ: ಪ್ರೀತಿ (ಬೆ.10.40) / ಕರಣ: ಗರಜೆ-ವಣಿಜ್ (ಬೆ.10.32-ರಾ.09.46)
ಮಳೆ ನಕ್ಷತ್ರ: ಭರಣಿ / ಮಾಸ: ಮೇಷ / ತೇದಿ: 30

ಇಂದಿನ ವಿಶೇಷ : ಪ್ರದೋಷ 

ರಾಶಿ ಭವಿಷ್ಯ  :  

ಮೇಷ : ಮಾತಿನ ಆವೇಶದಲ್ಲಿ ಅಪಕೀರ್ತಿ ಬರು ವುದು, ಪ್ರೇಮಿಗಳಲ್ಲಿ ವೈಮನಸ್ಸು ಉಂಟಾಗಲಿದೆ
ವೃಷಭ : ಅನೇಕ ತೊಂದರೆಗಳ ಮಧ್ಯೆ ಕೆಲಸಗಳಾಗುವುವು
ಮಿಥುನ : ರಾಜಕೀಯದಲ್ಲಿ ಯಶಸ್ಸು ದೊರೆಯುತ್ತದೆ
ಕಟಕ : ವ್ಯವಸಾಯದಲ್ಲಿ ಉತ್ತಮ ಲಾಭವಿದೆ
ಸಿಂಹ: ಕುಟುಂಬದಲ್ಲಿದ್ದ ಕಲಹ ಪರಿಹಾರವಾಗುವ ಸೂಚನೆಗಳಿವೆ
ಕನ್ಯಾ: ದಿನದ ಪ್ರಾರಂಭದಲ್ಲಿ ಬಹಳ ಎಚ್ಚರಿಕೆಯಿಂದಿರಿ
ತುಲಾ: ಮಕ್ಕಳ ಬಗೆಗಿದ್ದ ಸಮಸ್ಯೆ ಪರಿಹಾರವಾಗಲಿದೆ
ವೃಶ್ಚಿಕ: ಗೆಳತಿಯ ಸಹಾಯ- ಸಹಕಾರ ಪಡೆಯುತ್ತೀರಿ, ಬ್ಯಾಂಕ್ ಸಾಲ ಮಾಡುವಿರಿ
ಧನುಸ್ಸು: ಹೊಸ ಉದ್ಯೋಗಕ್ಕೆ ಪ್ರಯತ್ನ ಪಡುವಿರಿ
ಮಕರ: ಜೀವನದಲ್ಲಿ ದೊಡ್ಡ ಬದಲಾವಣೆ ಯಾಗಬಹುದು, ಮಾತಿನಲ್ಲಿ ಗೆಲುವು ಸಾಧಿಸುವಿರಿ
ಕುಂಭ: ಅಧಿಕ ರಕ್ತದೊತ್ತಡದಿಂದ ಅನಾರೋಗ್ಯ ಕಾಡಬಹುದು, ಆರೋಗ್ಯ ಕಾಪಾಡಿಕೊಳ್ಳಿ
ಮೀನ: ದೈವಾನುಗ್ರಹವಿಲ್ಲದೆ ಕೈ ಹಿಡಿದ ಕೆಲಸ- ಕಾರ್ಯಗಳಲ್ಲಿ ಸೋಲು ಎದುರಿಸಬೇಕಾಗುತ್ತದೆ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin