ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-05-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :  ಅಧ್ಯಾಪಕನಾದವನು ಈ ಹತ್ತು ಮಂದಿಗೆ ಕರ್ತವ್ಯವೆಂದು ತಿಳಿದು ಪಾಠ ಹೇಳಿ ಕೊಡಬೇಕು. ತನ್ನ ಆಚಾರ್ಯರ ಮಗ, ತನಗೆ ಸೇವೆ ಮಾಡುವವನು, ಬೇರೆ ವಿದ್ಯೆಯನ್ನು ಹೇಳಿಕೊಡುವವನು, ಧರ್ಮವನ್ನು ಬಲ್ಲವನು, ಶುಚಿಯಾಗಿರುವವನು, ನೆಂಟ, ತಿಳಿದು ಯೋಚಿಸಬಲ್ಲವನು, ಹಣ ಕೊಡುವವನು, ಹಿತೈಷಿ, ಜ್ಞಾತಿ. -ಮನುಸ್ಮೃತಿ

Rashi

ಪಂಚಾಂಗ : 19.05.2018 ಶನಿವಾರ

ಸೂರ್ಯ ಉದಯ ಬೆ.05.54 / ಸೂರ್ಯ ಅಸ್ತ ಸಂ.06.39
ಚಂದ್ರ ಉದಯ / ಬೆ.09.32 / ಚಂದ್ರ ಅಸ್ತ ಸಂ.10.41
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಅಧಿಕ ಜ್ಯೇಷ್ಠ ಮಾಸ
ಶುಕ್ಲ ಪಕ್ಷ / ತಿಥಿ : ಪಂಚಮಿ (ರಾ.02.44)
ನಕ್ಷತ್ರ: ಪುನರ್ವಸು (ರಾ.12.25) / ಯೋಗ: ಶೂಲ (ಮ.12.03)
ಕರಣ: ಭದ್ರೆ-ಭವ-ಬಾಲವ (ಬೆ.05.28-ಸಾ.04.04-ರಾ.02.44)
ಮಳೆ ನಕ್ಷತ್ರ: ಕೃತ್ತಿಕಾ / ಮಾಸ: ವೃಷಭ / ತೇದಿ: 05

ಇಂದಿನ ವಿಶೇಷ :

ರಾಶಿ ಭವಿಷ್ಯ  :  

ಮೇಷ : ಅಣ್ಣ-ತಮ್ಮಂದಿರು ನಿಮ್ಮ ವಿರುದ್ಧ ತಿರುಗಿ ಬೀಳಬಹುದು, ಆರೋಗ್ಯ ಉತ್ತಮವಾಗಿರುವುದು
ವೃಷಭ : ಪ್ರಯತ್ನಿಸಿದ ಕಾರ್ಯದಲ್ಲಿ ನಿಧಾನವಾಗಿ ಜಯ ಸಿಗುತ್ತದೆ, ಕಲಾವಿದರಿಗೆ, ವ್ಯಾಪಾರಿಗಳಿಗೆ ಸಕಾಲ
ಮಿಥುನ: ಸರ್ಕಾರಿ ನೌಕರರಿಗೆ ಉತ್ತಮವಾಗಿರುವುದಿಲ್ಲ
ಕಟಕ : ಸ್ತ್ರೀ ಮೂಲಕ ಹಣ ವ್ಯಯವಾಗುವುದು
ಸಿಂಹ: ಕೆಲವರಿಗೆ ಸನ್ಮಾನ ಸಮಾರಂಭಗಳು ನಡೆಯಬಹುದು
ಕನ್ಯಾ: ನ್ಯಾಯಾಲಯದ ವ್ಯವ ಹಾರ ಮಾಡದಿರುವುದೇ ಒಳಿತು
ತುಲಾ: ಕುಟುಂಬದಲ್ಲಿನ ಕಿರಿಕಿರಿ ಶಾಂತವಾಗುತ್ತದೆ
ವೃಶ್ಚಿಕ: ಹೆಚ್ಚು ಹಣ ಗಳಿಸುವುದಕ್ಕೆ ಉತ್ತಮ ಅವಕಾಶಗಳು ಲಭಿಸಲಿವೆ
ಧನುಸ್ಸು: ಮಿತ್ರರು ಧನ ಸಹಾಯ ಮಾಡಬಹುದು
ಮಕರ: ಕಾನೂನು ಸಮಸ್ಯೆಗಳು ಕಾಡಬಹುದು, ವ್ಯವಹಾರಗಳನ್ನು ಎಚ್ಚರಿಕೆಯಿಂದ ಮಾಡಿರಿ
ಕುಂಭ: ಸಹೋದರ, ಸಹೋದರಿಯರಲ್ಲಿ, ಅಕ್ಕಪಕ್ಕದವರಲ್ಲಿ ವೈಮನಸ್ಸು ಕಂಡುಬರುತ್ತದೆ
ಮೀನ: ಗುಪ್ತ ಶತ್ರುಗಳಿಂದ ತೊಂದರೆಯಾಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin