ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-06-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  :   ಜಿಪುಣನು ಹಣವನ್ನು ಕೈಬಿಡುವುದಿಲ್ಲ. ತಾನೂ ಅನುಭವಿಸುವುದಿಲ್ಲ. ಏಕಿರಬಹುದು? ಹಣವು ಆತನಿಗೆ ಶರಣಾಗತವಾಗಿರಬಹುದೆ? ಅಥವಾ ವಿಷದಂತೆ ಆತನನ್ನು ಕೊಲ್ಲಬಹುದೆ? -ಕುವಲಯಾನಂದ

Rashi

ಪಂಚಾಂಗ : 01.06.2018 ಶುಕ್ರವಾರ

ಸೂರ್ಯಉದಯ ಬೆ.5.53 / ಸೂರ್ಯ ಅಸ್ತ ಸಂ.6.43
ಚಂದ್ರ ಉದಯ ರಾ.9.04 / ಚಂದ್ರ ಅಸ್ತ ಬೆ.7.57
ವಿಲಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು
ಅಧಿಕ ಜ್ಯೇಷ್ಠ ಮಾಸ / ಕೃಷ್ಣ ಪಕ್ಷ / ತಿಥಿ : ತೃತೀಯಾ (ರಾ.1.45)
ನಕ್ಷತ್ರ: ಪೂರ್ವಾಷಾಢ / ದಿನಪೂರ್ತಿ / ಯೋಗ: ಶುಭ (ಸಾ.6.52)
ಕರಣ: ವಣಿಜ್-ಭದ್ರೆ (ಮ.12.33-ರಾ.1.45) / ಮಾಸ: ವೃಷಭ / ತೇದಿ: 18

ದಿನದ ವಿಶೇಷ: ಸಾಯನ ವೈಧೃತಿ ರಾ.4.27

ರಾಶಿ ಭವಿಷ್ಯ  :  

ಮೇಷ : ದೇಹಾಲಸ್ಯದಿಂದ ಕೆಲಸದಲ್ಲಿ ನಿಧಾನ
ವೃಷಭ : ಆರೋಗ್ಯ ಸಮಸ್ಯೆ ಉಂಟಾದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ
ಮಿಥುನ: ಮಾತಿನ ಭರದಿಂದ ಪೇಚಿಗೆ ಸಿಲುಕುವಿರಿ, ಎಚ್ಚರಿಕೆಯಿಂದ ಕೆಲಸ ಮಾಡಿ
ಕಟಕ : ಮನಸ್ಸಿನ ತುಮುಲಗಳನ್ನು ಇತರರೊಂದಿಗೆ ಹಂಚಿಕೊಳ್ಳಿ
ಸಿಂಹ: ಕೆಲಸ-ಕಾರ್ಯಗಳಲ್ಲಿ ಸ್ವಲ್ಪ ಹಿನ್ನಡೆ ಉಂಟಾಗಲಿದೆ
ಕನ್ಯಾ: ಸಮಾಜದಲ್ಲಿ ಗೌರವ ಪ್ರತಿಷ್ಠೆ ಹೆಚ್ಚಾಗಲಿದೆ
ತುಲಾ: ಸಹೋದ್ಯೋಗಿಗಳ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಿ, ಉತ್ತಮ ದಿನ
ವೃಶ್ಚಿಕ : ಕೆಲವು ಮಾತುಗಳಿಂದ ಮಾನಸಿಕವಾಗಿ ನೋವು ಅನುಭವಿಸುವಿರಿ
ಧನುಸ್ಸು: ಉತ್ತಮ ಬಂಡವಾಳ ಹೂಡಿಕೆಗೆ ಸಕಾಲ, ಆರ್ಥಿಕ ಸ್ಥಿತಿಯಲ್ಲಿ ಚೇತರಿಕೆ ಕಂಡುಬರಲಿದೆ
ಮಕರ: ದೂರ ಪ್ರಯಾಣದಲ್ಲಿ ಎಚ್ಚರ ವಹಿಸಿ
ಕುಂಭ: ಇತರರ ಅಸೂಯೆಗೆ ಒಳಗಾಗುವಿರಿ
ಮೀನ: ಮತ್ತೊಬ್ಬರ ವಿಷಯಗಳಲ್ಲಿ ತಲೆ ಹಾಕದಿರಿ.

+ ಡಾ. ವಿಶ್ವಪತಿ ಶಾಸ್ತ್ರಿ

ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

 

Facebook Comments

Sri Raghav

Admin