ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-02-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಕೇವಲ ಕವಿತೆಯನ್ನು ಬಲ್ಲೆನೆನ್ನುವುದು ಕುರಿಗಳು. ಸುಮ್ಮನೇ ಓದಿ ಪಂಡಿತರಾದವರು ಗಿಣಿಗಳು. ವಿಷವನ್ನರಿತ ಕವಿಗಳೇ ನಿಜವಾದ ಕವಿಗಳು. ಅವರನ್ನು ಅವಮಾನಗೊಳಿಸುವವನು ಕೇವಲ ಮೃಗ  – ಅಜ್ಞಾತ

Rashi

ಪಂಚಾಂಗ : ಶುಕ್ರವಾರ, 03.02.2017

ಸೂರ್ಯ ಉದಯ ಬೆ.06.46 / ಸೂರ್ಯ ಅಸ್ತ  ಸಂ.06.22
ಚಂದ್ರ ಉದಯ ಬೆ.11.25/ ಚಂದ್ರ ಅಸ್ತ ರಾ.12.08
ದುರ್ಮುಖಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಶುಕ್ಲ ಪಕ್ಷ
ತಿಥಿ:ಸಪ್ತಮಿ  (ರಾ.10.50) / ನಕ್ಷತ್ರ: ಅಶ್ವಿನಿ (ರಾ.08.02)
ಯೋಗ: ಶುಭ (ರಾ.11.57) / ಕರಣ: ಗರಜೆ-ವಣಿಜ್  (ಬೆ.11.48-ರಾ.10.50)
ಮಳೆ ನಕ್ಷತ್ರ: ಶ್ರವಣ / ಮಾಸ: ಮಕರ / ತೇದಿ: 21

ರಾಶಿ ಭವಿಷ್ಯ :

ಮೇಷ : ಪ್ರವಾಸದ ಅವಕಾಶಗಳನ್ನು ಪರಿಶೋಧಿಸಿ.
ವೃಷಭ :ಸ್ನೇಹಿತರ ಜೊತೆ ಆಹ್ಲಾದಕರ ಕ್ಷಣಗಳನ್ನು ಕಳೆಯುವಿರಿ. ದಿಟ್ಟ ನಿರ್ಧಾರ ಲಾಭ ತರಲಿದೆ.
ಮಿಥುನ: ದುರ್ಬಲ ಆರ್ಥಿಕ ಸ್ಥಿತಿಯಿಂದ ಕೆಲವು ಪ್ರಮುಖ ಕೆಲಸಗಳು ಸ್ಥಗಿತಗೊಳ್ಳಲಿವೆ.
ಕಟಕ : ಹೂಡಿಕೆ ನಿರ್ಧಾರಗಳನ್ನು ಮುಂದೂಡವುದು ಉತ್ತಮ.
ಸಿಂಹ: ಮಂಕು ಕವಿದ ಮತ್ತು ಒತ್ತಡದ ದಿನ. ಅಭದ್ರತೆ ಕಾಡಲಿದೆ.
ಕನ್ಯಾ: ವ್ಯವಹಾರ ನಿಮಿತ್ತ ಪ್ರಯಾಣ ಸಾಧ್ಯತೆ.
ತುಲಾ: ನೇರ ಮಾತುಗಳಿಂದ ಸಹವರ್ತಿಗಳು ಸಿಟ್ಟಾಗುವ ಸಂಭವವಿದ್ದು, ಎಚ್ಚರವಹಿಸಿ.
ವೃಶ್ಚಿಕ :ಅನ್ಯಮೂಲದ ಸುದ್ದಿಯನ್ನು ಪರಿಶೀಲಿಸಿ.
ಧನುಸ್ಸು: ಸಂಗಾತಿಯ ಅನಾರೋಗ್ಯ ಚಿಂತೆಗೀಡು ಮಾಡಲಿದೆ.
ಮಕರ: ಮನರಂಜನೆಗಾಗಿ ಹೆಚ್ಚು ಖರ್ಚು.
ಕುಂಭ: ನಿಮ್ಮ ಸಂವಹನ ತಂತ್ರಗಳು ಮತ್ತು ಕೆಲಸದ ಕೌಶಲ್ಯಗಳು ಪರಿಣಾಮಕಾರಿಯಾಗಲಿದೆ.
ಮೀನ: ಸಂಗಾತಿಯ ವರ್ತನೆಯಿಂದ ವೃತ್ತಿಪರ ಸಂಬಂಧಗಳಿಗೆ ತೊಂದರೆಯಾಗಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin