ಇಂದು-ನಾಳೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಉತ್ತಮ ಮಳೆ ಸಂಭವ

ಈ ಸುದ್ದಿಯನ್ನು ಶೇರ್ ಮಾಡಿ

Rain-01

ಬೆಂಗಳೂರು, ಆ.30- ಕಳೆದ ಮೂರ್ನ್ಪಾಲ್ಕು ವಾರಗಳಿಂದ ಸರಿಯಾಗಿ ಮಳೆಯಾಗದೆ ಬಿತ್ತಿದ ಬೆಳೆಯೂ ಮೊಳಕೆಯೊಡೆಯದೆ ರೈತ ಸಮುದಾಯದಲ್ಲಿ ಆತಂಕ ಸೃಷ್ಟಿಯಾಗಿದ್ದ ಬೆನ್ನಲ್ಲೇ ನಿನ್ನೆಯಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಉತ್ತಮ ಮಳೆ ಆರಂಭವಾಗಿದೆ. ಇಂದು ಮತ್ತು ನಾಳೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಳ್ಳೆಯ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ಈ ಸಂಜೆಗೆ ತಿಳಿಸಿದರು.  ಮಂಡ್ಯ, ವಿಜಯಪುರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಳ್ಳೆಯ ಮಳೆಯಾದ ವರದಿಯಾಗಿದೆ. ಇಂದು ಹೈದರಾಬಾದ್ ಕರ್ನಾಟಕದ ಬೀದರ್, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಗಳಿವೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಒಳ್ಳೆಯ ಮಳೆಯಾಗುವ ಮುನ್ಸೂಚನೆಗಳಿವೆ. ಮಳೆ ಕೊರತೆ ನಡುವೆಯೂ ಅಳಿದುಳಿದಿರುವ ಬೆಳೆಗಳಿಗೆ ಈ ಮಳೆ ಆಸರೆಯಾಗಲಿದೆ ಎಂದರು.  ಸೆಪ್ಟೆಂಬರ್ನಲ್ಲೂ ಕೂಡ ಉತ್ತಮ ಮಳೆಯಾಗುವ ಆಶಾದಾಯಕ ಪರಿಸ್ಥಿತಿ ಇಲ್ಲ. ಆದರೆ, ಆಗಸ್ಟ್ನಲ್ಲಿ ಕಾಡಿದಂತೆ ಸತತ ಒಣಹವೆ ಇರುವುದಿಲ್ಲ. ಆಗಸ್ಟ್ನಲ್ಲಿ ಸರಿಸುಮಾರು ನಾಲ್ಕು ವಾರವೂ ಕೂಡ ಮಳೆ ಕೊರತೆಯನ್ನು ರಾಜ್ಯದ ಬಹುತೇಕ ಭಾಗಗಳು ಎದುರಿಸಿದ್ದವು. ಮುಂದಿನ ಸೆಪ್ಟೆಂಬರ್ನಲ್ಲಿ ವಾಡಿಕೆ ಪ್ರಮಾಣದ ಮಳೆಯಾಗುವ ನಿರೀಕ್ಷೆಯಿದೆ. ಆದರೆ, ಜಲಾಶಯಗಳಿಗೆ ನೀರು ಬರುವಂತಹ ಮಳೆಯಾಗುವ ಸಾಧ್ಯತೆಗಳು ವಿರಳ ಎಂದು ಅವರು ಸ್ಪಷ್ಟಪಡಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin