ಇಂದು ಬೆಂಗಳೂರಿನ ಬನಶಂಕರಿ ದೇವಿಯ ದರ್ಶನ ಸಿಗಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Banashankari--01
ಬೆಂಗಳೂರು, ಜ.15-ಬನಶಂಕರಿ ದೇವಸ್ಥಾನದ ಪ್ರಧಾನ ಅರ್ಚಕರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಭಕ್ತರಿಗೆ ದೇವರ ದರ್ಶನವನ್ನು ಇಂದು ರದ್ದುಗೊಳಿಸಲಾಗಿದೆ. ಪ್ರಧಾನ ಅರ್ಚಕರಾದ ಸೂರ್ಯಪ್ರಕಾಶ್ ಅವರು ಹೃದಯಾಘಾತದಿಂದ ನಿಧನ ಹೊಂದಿರುವ ಹಿನ್ನೆಲೆಯಲ್ಲಿ ಇಂದು ಬನಶಂಕರಿದೇವಿ ದರ್ಶನವನ್ನು ರದ್ದುಗೊಳಿಸಲಾಗಿದೆ. ಇಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ನೂರಾರು ಭಕ್ತರು ದೇವಾಲಯಕ್ಕೆ ಆಗಮಿಸಿದ್ದು, ವಿಷಯ ತಿಳಿದ ನಂತರ ನಿರಾಸೆಯಿಂದ ಹಿಂತಿರುಗಿದ ಪ್ರಸಂಗ ನಡೆಯಿತು.

Facebook Comments

Sri Raghav

Admin