ಇಂದು ಭಾರತ್ ಬಂದ್ : ಸಾರ್ವಜನಿಕರಿಂದ ವ್ಯಕ್ತವಾಗದ ‘ಆಕ್ರೋಶ’, ಎಂದಿನಂತೆ ಜನಜೀವನ

ಈ ಸುದ್ದಿಯನ್ನು ಶೇರ್ ಮಾಡಿ

Bandh

ಬೆಂಗಳೂರು. ನ. 28 : ನೋಟು ರದ್ದತಿ ವಿರೋಧಿಸಿ ವಿಪಕ್ಷಗಳು ‘ಆಕ್ರೋಶ ದಿವಸ್’ ಹೆಸರಿನಲ್ಲಿ ಕರೆಕೊಟ್ಟಿದ್ದ ಭಾರತ್ ಬಂದ್ ಗೆ ಈ ವರೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಬೆಂಗಳೂರು ಸೇರಿದಂತೆ ರಾಜ್ಯ ಮತ್ತು ದೇಶದೆಲ್ಲೆಡೆ ಜನಜೀವನ ಎಂದಿನಂತೆ ಇದ್ದು ಯಾವುದೇ ರೀತಿಯ ಬಂದ್ ಎಫೆಕ್ಟ್ ತಟ್ಟಿಲ್ಲ. ಬೆಂಗಳೂರಿನಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ ಮತ್ತು  ಮೆಟ್ರೋ  ಸಂಚಾರ ಎಂದಿನಂತಿದ್ದು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಭಾರತ್ ಬಂದ್ ಜನಸಾಮಾನ್ಯರಿದ ಈ ವರೆಗೆ ಯಾವುದೇ ಆಕ್ರೋಶ ವ್ಯಕ್ತವಾಗಿಲ್ಲ. ಇನ್ನು ಕೆಆರ್ ಮಾರ್ಕೆಟ್ ಸೇರಿದಂತೆ ಬೆಂಗಳೂರಿನಲ್ಲಿ ವ್ಯಾಪಾರ ವಹಿವಾಟು ಎಂದಿನಂತೆ ಸಾಗಿದ್ದು ಭಾರತ್ ಬಂದ್ ಬಿಸಿ ಜನಸಾಮಾನ್ಯರಿಗೆ ತಟ್ಟಿಲ್ಲ ಮತ್ತು ಜಯನಸಾಮಾನ್ಯರಿಂದ ಬಂದ್ ಗೆ ಯಾವುದೇ ಪ್ರತಿಕ್ರಿಯೆಯು ಉಂಟಾಗಿಲ್ಲ.


Sorry, there are no polls available at the moment.

ಬಿಗಿ ಭದ್ರತೆ : ಭಾರತ್ ಬಂಧ್ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸಜ್ಜಾಗಿದ್ದು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಪೊಲೀಸರು ಸನ್ನದ್ಧರಾಗಿದ್ದಾರೆ. ಬಂದ್ ವೇಳೆ ಬಿಗಿ ಬಂದೋಬಸ್ತ್ ಕೈಗೊಳ್ಳುವಂತೆ ಇಂದೂ ಕೂಡ ಪೊಲೀಸ್ ಇಲಾಖೆ ಭದ್ರತೆಗೆ ಮುಂದಾಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin