ಇಂದು ರಾಷ್ಟ್ರಪತಿಗಳಿಂದ ಖೇಲ್‍ರತ್ನ, ದ್ರೋಣಾಚಾರ್ಯ ಪ್ರಶಸ್ತಿ ಪ್ರದಾನ

ಈ ಸುದ್ದಿಯನ್ನು ಶೇರ್ ಮಾಡಿ

Award--01

ನವದೆಹಲಿ, ಆ. 29- ಅಂತಾರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಇಂದು ರಾಷ್ಟ್ರಪತಿ ಭವನದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ 17 ಕ್ರೀಡಾ ಪಟುಗಳಿಗೆ ಖೇಲ್ ರತ್ನ ಹಾಗೂ ತರಬೇತುದಾರರಿಗೆ ದ್ರೋಣಾಚಾರ್ಯ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರದಾನ ಮಾಡಲಿದ್ದಾರೆ. ಪ್ಯಾರಾ ಒಲಿಂಪಿಕ್ಸ್‍ನಲ್ಲಿ ಅದ್ಭುತ ಪ್ರದರ್ಶನ ತೋರಿದ ಮರಿಯಪ್ಪನ್ ಹಾಗೂ ವರುಣ್ ಸಿಂಗ್ ಬಾಟಿ ಅವರಿಗೆ ಅರ್ಜುನ ಪ್ರಶಸ್ತಿಯನ್ನು ರಾಷ್ಟ್ರಪತಿಯವರು ಪ್ರದಾನ ಮಾಡಿ ಗೌರವಿಸಲಿದ್ದಾರೆ. 2004ರ ಅಥೆನ್ಸ್ ಗೇಮ್ಸ್ ಹಾಗೂ 2013ರ ವಿಶ್ವ ಚಾಂಪಿಯನ್ಸ್‍ಷಿಪ್‍ನ ಪ್ಯಾರಾ ಒಲಿಂಪಿಕ್ಸ್‍ನಲ್ಲಿ ನೂತನ ದಾಖಲೆ ನಿರ್ಮಿಸಿದ ದೇವಿಂದ್ರ ಜಾಜಾರಿಯಾ, ಭಾರತದ ಹಾಕಿ ತಂಡವನ್ನು ಮೇಲಸ್ತರಕ್ಕೇರಿಸಿದ ಸರ್ದಾರ್ ಸಿಂಗ್‍ಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ನೀಡಿ ಕೋವಿಂದ್ ಇಂದು ಸನ್ಮಾನಿಸಲಿದ್ದಾರೆ.

ಇನ್ನುಳಿದಂತೆ ಜ್ಯೋತಿ ಸುರೇಖಾ ವಿನ್ನಮ್ (ಆರ್ಚರಿ), ಕುಶ್‍ಬೀರ್ ಕೌರ್ (ಅಥ್ಲೇಟಿಕ್ಸ್), ಪ್ರಶಾಂತಿ ಸಿಂಗ್ (ಬ್ಯಾಸ್ಕೆಟ್ ಬಾಲ್), ಲೇಸ್‍ರಾಮ್ ದೇವೊಂದರ್ ಸಿಂಗ್ (ಬಾಕ್ಸಿಂಗ್), ಚೇತೇಶ್ವರ್ ಪೂಜಾರ , ಹರ್ಪಿತ್‍ಕೌರ್ (ಕ್ರಿಕೆಟ್), ಒಹಿನಾಮ್ ಬಿಮ್‍ಬಿಮ್ ದೇವಿ (ಫುಟ್ಬಾಲ್), ಎಸ್‍ಎಸ್‍ಪಿ ಚವ್‍ರಾಸಿಯಾ, ಎಸ್‍ವಿ ಸುನೀಲ್ (ಹಾಕಿ), ಜಸ್‍ವೀರ್ ಸಿಂಗ್ (ಕಬ್ಬಡಿ), ಕನ್ನಡಿಗ ಪ್ರಕಾಶ್ ನಂಜಪ್ಪ ( ಶೂಟಿಂಗ್), ಆಂಟೋನಿ ಅಮಲ್‍ರಾಜ್(ಟೇಬಲ್‍ಟೆನ್ನಿಸ್),ಸನಮ್ ಸಿಂಗ್ (ಟೆನ್ನಿಸ್), ಸತ್ಯವಾರ್ಟ್ ಕದಿಯಾನ್(ಕುಸ್ತಿ) ಇವರಿಗೆ ಖೇಲ್ ರತ್ನ ಪ್ರಶಸ್ತಿ ಲಭಿಸಲಿದೆ.

ದ್ರೋಣಾಚಾರ್ಯ ಪ್ರಶಸ್ತಿ:

ದಿವಂಗತ ಡಾ.ಆರ್. ಗಾಂಧಿ (ಅಥ್ಲೆಟಿಕ್ಸ್), ಹೇರಾ ನಂದ್ ಕಟಾರಿಯಾ (ಕಬ್ಬಡಿ), ಜಿಎಸ್‍ಎಸ್‍ವಿ ಪ್ರಸಾದ್ (ಬ್ಯಾಡ್ಮಿಂಟನ್, ಜೀವಮಾನ ಸಾಧನೆ), ಬಿರ್ಜ್ ಭೂಷಣ್ ಮೊಹಾಂತಿ (ಬಾಕ್ಸಿಂಗ್- ಜೀವಮಾನ ಸಾಧನೆ), ಪಿ.ಎ. ರಾಪ್‍ಹಿಲ್ (ಹಾಕಿ, ಜೀವಮಾನ ಸಾಧನೆ), ಸ್ಯಾನ್‍ಜೋಯ್ ಚಕ್ರವರ್ತಿ ( ಶೂಟಿಂಗ್- ಜೀವಮಾನ ಸಾಧನೆ), ರೋಷನ್ ಲಾಲ್ (ಕುಸ್ತಿ- ಜೀವಮಾನ ಸಾಧನೆ).

ಧ್ಯಾನ್ ಚಂದ್ ಪ್ರಶಸ್ತಿ:  ಭುಪೆಂದರ್ ಸಿಂಗ್ (ಅಥ್ಲೆಟಿಕ್ಸ್), ಸೈಯದ್ ಸಾಹಿದ್ ಹಕ್ಕಿಮ್ (ಫುಟ್ಬಾಲ್), ಸುಮರೈ ಟೆಟೆ (ಹಾಕಿ).

Facebook Comments

Sri Raghav

Admin