ಇಂದೋರ್‌ನಲ್ಲಿ ವೇಗಿಗಳ ದಾಳಿಗೆ ಬಸವಳಿದ ಬಾಂಗ್ಲಾ ಬ್ಯಾಟ್ಸ್‌ಮೆನ್‌ಗಳು

ಈ ಸುದ್ದಿಯನ್ನು ಶೇರ್ ಮಾಡಿ

ಇಂಧೋರ್, ನ.14- ಟೀಂ ಇಂಡಿಯಾದ ವೇಗದ ಬೌಲಿಂಗ್ ದಾಳಿಗೆ ಬಸವಳಿದಿರುವ ಬಾಂಗ್ಲಾ ಬ್ಯಾಟ್ಸ್‌ಮೆನ್‌ಗಳು ತಂಡದ ಮೊತ್ತ 100 ರನ್‍ಗಳಾಗುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‍ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ಕೈಗೊಂಡ ಬಾಂಗ್ಲಾ ನಾಯಕ ಮೊಯಿನುಲ್ ಹಕ್‍ಗೆ ಆರಂಭದಿಂದಲೇ ಆಘಾತವನ್ನು ಅನುಭವಿಸಿದರು.

ಆರಂಭಿಕ ದಾಂಡಿಗರಾಗಿ ಮೈದಾನಕ್ಕೆ ಇಳಿದ ಶಾದ್‍ಮಾನ್ ಇಸ್ಲಾಂ ಹಾಗೂ ಇರ್ಮೂಲ್‍ಕಾಯಾಸ್ ಜೋಡಿಯನ್ನು ತಂಡದ ಮೊತ್ತ 12ರನ್‍ಗಳಾಗುವಷ್ಟರಲ್ಲಿ ಪೆವಿಲಿಯನ್‍ಗೆ ದಾರಿ ತೋರಿಸಿದರು. ಒಂದು ಬೌಂಡರಿ ಸಹಿತ 6 ರನ್ ಗಳಿಸಿದ ಇರ್ಮೂಲ್ ಕಾಯಾಸ್ ಉಮೇಶ್‍ಯಾದವ್ ಬೌಲಿಂಗ್‍ನಲ್ಲಿ ಅಜೆಂಕ್ಯಾ ರಹಾನೆ ಹಿಡಿದ ಅದ್ಭುತ ಕ್ಯಾಚಿಗೆ ಬಲಿಯಾದರೆ, ಮರು ಓವರ್‍ನಲ್ಲೇ ಇಶಾಂತ್ ಶರ್ಮಾ, ಶಾದ್‍ಮಾನ್ ಇಸ್ಲಾಂರನ್ನು ಔಟ್ ಮಾಡಿದರು.

ಆರಂಭಿಕ ಆಟಗಾರರನ್ನು ಕಳೆದುಕೊಂಡರು ಕೂಡ 3ನೆ ವಿಕೆಟ್ ಜೊತೆಗೂಡಿದ ನಾಯಕ ಮೊಯಿನುಲ್ ಹಕ್ (37ರನ್, 6 ಬೌಂಡರಿ) ಹಾಗೂ ಮೊಹಮ್ಮದ್ ಮಿಥುನ್ ( 13 ರನ್, 1 ಬೌಂಡರಿ) ತಂಡಕ್ಕೆ ಆಸರೆಯಾಗುತ್ತಿದ್ದಂತೆ ಮೊಹಮ್ಮದ್ ಶಮಿ ಬೌಲಿಂಗ್‍ನಲ್ಲಿ ಮಿಥುನ್ ಎಲ್‍ಬಿಡಬ್ಲ್ಯು ಬಲೆಗೆ ಬಿದ್ದರು.

 

Facebook Comments