ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಬಿಎಂಪಿ ಮೇಯರ್‍ಗೆ ಬಂಪರ್ ಕೊಡುಗೆ

ಈ ಸುದ್ದಿಯನ್ನು ಶೇರ್ ಮಾಡಿ

BBMP-Mayor--01
ಬೆಂಗಳೂರು, ಫೆ.28- ಬಿಬಿಎಂಪಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೇಯರ್ ಸಂಪತ್‍ರಾಜ್ ಅವರು 385.50 ಕೋಟಿ ರೂ.ಗಳ ಅನುದಾನವನ್ನು ತಮ್ಮ ವಿವೇಚನಾ ಕೋಟಾದಡಿ ಕಾಯ್ದಿರಿಸಿಕೊಂಡಿದ್ದಾರೆ. ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಮೇಯರ್ ನಿಧಿಗೆ 385 ಕೋಟಿ ರೂ.ಗಳ ಬೃಹತ್ ಅನುದಾನ ಮೀಸಲಿರಿಸಲಾಗಿದೆ. ಈ ಮೂಲಕ ಅತಿ ಹೆಚ್ಚು ಅನುದಾನ ಹೊಂದಿದ ಮೊದಲ ಮೇಯರ್ ಎಂಬ ಹೆಗ್ಗಳಿಕೆಗೆ ಆರ್.ಸಂಪತ್ ರಾಜ್ ಭಾಜನರಾಗಿದ್ದಾರೆ.

ಕರ್ನಾಟಕ ಸರ್ಕಾರದ 82 ಕೋಟಿ, 14ನೆ ಹಣಕಾಸು ಆಯೋಗದ 143.50 ಕೋಟಿ ಹಾಗೂ ಪಾಲಿಕೆಯ 160 ಕೋಟಿ ಅನುದಾನ ಸೇರಿದಂತೆ ಒಟ್ಟು 385.50 ಕೋಟಿ ರೂ.ಗಳನ್ನು ಮೇಯರ್ ವಿವೇಚನೆಗೆ ಬಿಡಲಾಗಿದೆ.

Facebook Comments

Sri Raghav

Admin