ಇತಿಹಾಸದಲ್ಲೇ ಇದೆ ಮೊದಲ ಬಾರಿಗೆ ವಿಶ್ವಸಂಸ್ಥೆಯಲ್ಲಿ ದೀಪಾವಳಿ ಆಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

Diwali-UN

ನ್ಯೂಯಾರ್ಕ್ ಅ.30 : ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯಲ್ಲಿ ದೀಪಾವಳಿ ಆಚರಿಸಲಾಯಿತು. ನ್ಯೂಯಾರ್ಕ್ ನಲ್ಲಿರುವ ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಮೂರು ದಿನಗಳ ಕಾಲ ದೀಪಾವಳಿ ಸಂಭ್ರಮ ಮನೆ ಮಾಡಲಿದೆ. ಮುಖ್ಯ ದ್ವಾರದ ಬಳಿ ಹ್ಯಾಪಿ ದೀಪಾವಳಿಯ ಲ್ಯಾಂಪ್ ರಾರಾಜಿಸ್ತಿದೆ. ಭಾರತೀಯ ಸಮುದಾಯದ ಜನರು ದೀಪಾವಳಿ ಆಚರಿಸಿ ಖುಷಿ ಹಂಚಿಕೊಂಡಿದ್ದಾರೆ. ಇದೊಂದು ಮರೆಯಲಾಗದ ಕ್ಷಣ ಎಂದಿದ್ದಾರೆ. ವಿಶ್ವಸಂಸ್ಥೆ ದೀಪಾವಳಿ ಆಚರಿಸಿರುವುದರಿಂದ ಭಾರತೀಯರಿಗೆ ಮತ್ತಷ್ಟು ಖುಷಿ ನೀಡಿದೆ. ವಿಶ್ವಸಂಸ್ಥೆ, ಈವರೆಗೆ ಯಾವುದೇ ಒಂದು ದೇಶದ ಉತ್ಸವ ಅಥವಾ ಹಬ್ಬವನ್ನು ಪ್ರಧಾನ ಕಚೇರಿಯಲ್ಲಿ ಆಚರಿಸಿಲ್ಲ. ಇದೇ ಮೊದಲ ಬಾರಿಗೆ ದೀಪಾವಳಿಯನ್ನು ಆಚರಿಸಿರುವುದು ಭಾರತೀಯರಿಗೆ ಹೆಮ್ಮೆಯುಂಟು ಮಾಡಿದೆ. ಈ ವರ್ಷದ ನಂತ್ರ ದೀಪಾವಳಿಯ ದಿನವನ್ನು ಐಚ್ಛಿಕ ರಜಾ ದಿನವೆಂದು ಘೋಷಣೆ ಮಾಡಲಾಗಿದೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin