ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ರೌಡಿ ಶೀಟರ್ ಪೈ ಹತ್ಯೆಗೆ ಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

Pai-Attack

ಮಂಡ್ಯ, ಫೆ.7- ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ರೌಡಿ ಶೀಟರ್ ಅಶೋಕ್ ಅಲಿಯಾಸ್ ಪೈ ಮೇಲೆ ಜನರ ಗುಂಪೊಂದು ಹಲ್ಲೆ ಮಾಡಿ ಹತ್ಯೆಗೆ ಪ್ರಯತ್ನಿಸಿರುವ ಘಟನೆ ಜಿಲ್ಲೆಯ ಮದ್ದೂರು ತಾಲ್ಲೂಕಿನ ಮಾದರಹಳ್ಳಿಯಲ್ಲಿ ನಡೆದಿದೆ.  ಬೈಕ್, ಕಾರು ಮತ್ತು ಟೆಂಪೋಗಳಲ್ಲಿ ಬಂದಿದ್ದ ಸುಮಾರು 30 ಜನರ ಗುಂಪು ಇಂದು ಬೆಳಗಿನ ಜಾವ ಮೂರು ಗಂಟೆ ಸುಮಾರಿನಲ್ಲಿ ಮಾದರಹಳ್ಳಿಯಲ್ಲಿರುವ ಅಶೋಕ್ ಮನೆಗೆ ನುಗ್ಗಿ ಹತ್ಯೆಗೆ ಯತ್ನಿಸಿದ್ದಾರೆ. ಹಲ್ಲೆಕೋರರು ಬಾಗಿಲು ಮುರಿದು ಮನೆಯೊಳಗೆ ನುಗ್ಗಿದ ವಿಷಯ ತಿಳಿಯುತ್ತಿದ್ದಂತೆ ಅಟ್ಟದ ಮೇಲೆ ಹೋಗಿ ಸೇರಿಕೊಂಡಿದ್ದಾನೆ. ಆದರೆ ದಾಳಿಕೋರರು ಅಟ್ಟದ ಮೇಲೆ ಹತ್ತಲು ಪ್ರಯತ್ನಿಸಿದಾಗ ಸುಮಾರು 30 ನಿಮಿಷ ಕಾಲ ಅವರೊಡನೆ ಹೋರಾಡಿ ಅವರು ಅಟ್ಟ ಹತ್ತದಂತೆ ನೋಡಿಕೊಂಡು ಕೊನೆಗೆ ಛಾವಣಿ ಮೇಲೆ ಹತ್ತಿದ್ದಾನೆ. ಇಷ್ಟರಲ್ಲಿ ಗದ್ದಲ ಕೇಳಿ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ. ಆಗ ಹಲ್ಲೆಕೋರರು ಪರಾರಿಯಾಗಿದ್ದು, ನಂತರ ಮನೆ ಮೇಲಿಂದ ಕೆಳಗಿಳಿದ ಪೈ ಪೊಲೀಸ್ ಠಾಣೆಗೆ ತೆರಳಿ ವಿಷಯ ತಿಳಿಸಿದ್ದಾನೆ.

ಪ್ರಸ್ತುತ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದು, ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಸಿಪಿಐ ಶಿವಮಲ್ಲು ಪಿಎಸ್‍ಐ ಅಯ್ಯನಗೌಡ ಮತ್ತು ತಂಡದವರು ಪರಿಶೀಲನೆ ನಡೆಸಿದ್ದಾರೆ.  ಕಳೆದ ಐದು ವರ್ಷಗಳ ಹಿಂದೆ ನಡೆದಿದ್ದ ಜಡೇಜಾ ರವಿ ಹತ್ಯೆ ಪ್ರಕರಣದಲ್ಲಿ ರೌಡಿ ಶೀಟರ್ ಅಶೋಕ್ ಅಲಿಯಾಸ್ ಪೈ ಪ್ರಮುಖ ಆರೋಪಿಯಾಗಿ ಜೈಲು ಸೇರಿದ್ದ. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದ ಕೇಸು ಖುಲಾಸೆಯಾಗಿ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಬಂದಿದ್ದ. ಮಂಡ್ಯ ಜಿಲ್ಲೆ ಕಲ್ಲಹಳ್ಳಿ ವಾಸಿಯಾಗಿರುವ ಪೈ ಮದ್ದೂರು ತಾಲ್ಲೂಕು ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾದರಹಳ್ಳಿಯಲ್ಲಿರುವ ತನ್ನ ಪತ್ನಿ, ಮಗಳ ಜತೆ ವಾಸ್ತವ್ಯವಿದ್ದ.

ಪ್ರಕರಣ ದಾಖಲಿಸಿಕೊಂಡಿರುವ ಕೆ.ಎಂ.ದೊಡ್ಡಿ ಠಾಣೆಯ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಪರಾರಿಯಾಗಿರುವ ಹಲ್ಲೆಕೋರರಿಗಾಗಿ ಹುಡುಕಾಟ ನಡೆಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin