ಇದು ಆತಂಕ ಪಡುವ ಸುದ್ದಿ, ಕರ್ನಾಟಕದಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತ..!

ಈ ಸುದ್ದಿಯನ್ನು ಶೇರ್ ಮಾಡಿ

Borewell--02

ಬೆಂಗಳೂರು, ಜ.6- ಕೇಂದ್ರ ಅಂತರ್ಜಲ ಮಂಡಳಿ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಪ್ರತಿ ರಾಜ್ಯದಲ್ಲಿ ಅಂತರ್ಜಲ ಪ್ರಮಾಣ ಎಷ್ಟಿದೆ ಎನ್ನುವುದನ್ನು ವರದಿ ಮಾಡಿತ್ತು. ಇದರ ಪ್ರಕಾರ ಕರ್ನಾಟಕದಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿದ್ದು ಶೇ.69ರಷ್ಟು ಬಾವಿಗಳ ಅಂತರ್ಜಲ ಕುಸಿದಿದೆ ಎಂದು ವರದಿಯಾಗಿದೆ. ಅಂತರ್ಜಲ ಕುಸಿತದ ಕಾರಣ ಈ ಬಾರಿ ಬೇಸಿಗಯಲ್ಲಿ ತೀವ್ರ ತರದ ಬರಗಾಲ ಎದುರಿಸುವ ಪರಿಸ್ಥಿತಿ ಬರಲಿದೆ. ಹೀಗೇ ಮುಂದುವರಿದರೆ ಬಹುತೇಕ ಮರುಭೂಮಿಯಾಗಿರುವ ರಾಜಸ್ಥಾನಕ್ಕಿಂತಲೂ ಕೆಟ್ಟ ಪರಿಸ್ಥಿತಿ ನಮಗೆದುರಾಗಲಿ ಎಂದು ವರದಿಯಲ್ಲಿ ಹೇಳಲಾಗಿದೆ.

ರಾಜ್ಯದಲ್ಲಿ ಶೇ.50ರಷ್ಟು ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿತ ಕಂಡಿದೆ. ನಗರ ಕೇಂದ್ರಗಳಲ್ಲಿ ಬಿಡುವಿಲ್ಲದ ನಿರ್ಮಾಣ ಕಾಮಗಾರಿಗಳು, ಅತಿಯಾದ ಜನಸಂಖ್ಯೆ ಮತ್ತು ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಅವೈಜ್ಞಾನಿಕ ಕೃಷಿ ಪದ್ದತಿ ಅಲವಡಿಸಿಕೊಂಡಿರುವುದು ಇಂದಿನ ಈ ದಾರುಣ ಸ್ಥಿತಿಗೆ ಕಾರಣ.  ದಕ್ಷಿಣದ ನಾಲ್ಕು ರಾಜ್ಯಗಳಾದ ಕರ್ನಾಟಕ, ಆಂದ್ರ ಪ್ರದೇಶ, ತಮಿಳು ನಾಡು ಹಾಗೂ ಕೇರಳಗಳಲ್ಲಿ ಅಂತರ್ಜಲ ಪ್ರಮಾಣ ತೀವ್ರತರವಾಗಿ ಕುಸಿದಿದೆ. ಇದರಲ್ಲಿ ಆಂದ್ರ ಪ್ರದೇಶದಲ್ಲಿ ಶೇ.75 ರಷ್ಟು ಬಾವಿಗಳಲ್ಲಿ ನೀರಿನ ಕೊರತೆ ಇದ್ದರೆ ತಮಿಳು ನಾಡಿನ 87 ಹಾಗು ಕೇರಳದ ಶೇ.70 ಬಾವಿಗಳು ಒಣಗುವ ಸೂಚನೆ ಇದೆ. ತೆಲಂಗಾಣ, ಮಧ್ಯ ಪ್ರದೇಶ, ರಾಜಸ್ಥಾನ, ತ್ರಿಪುರಾ ಹಾಗು ಗುಜರಾತ್‍ಗಳಲ್ಲಿ ಅಂತರ್ಜಲ ಮಟ್ಟ ದಕ್ಷಿಣ ರಾಜ್ಯಗಳಿಗಿಂತ ಉತ್ತಮ ಸ್ಥಿತಿಯಲ್ಲಿದೆ ಎಂದು ವರದಿಯಲ್ಲಿ ಹೇಳಿದೆ.

ರಾಗಿ, ತೆಂಗಿನಕಾಯಿ, ಬಾಳೆ, ಅಡಿಕೆ, ಕಬ್ಬು ಮತ್ತು ಇತರಹೆಚ್ಚು ನೀರು ಬೇಕಾಗುವ ಬೆಳೆಗಳಿಗೆ ರೈತರು ಹರಿವ ನೀರಿನ ಮೂಲಗಳಿಂದ ನೀರನ್ನು ಹಾಯಿಸುವ ಬದಲು ಕೊಳವೆ ಬಾವಿಗಳನ್ನು ತೊಡೊಸೊ ನೀರು ಹಾಯಿಸುತ್ತಿದ್ದಾರೆ. ಕೃಷಿಗೆ ಸಾಕಷ್ಟು ನೀರು ಅಗತ್ಯವಾಗಿರುವ ಕಾರಣ ನಿತ್ಯವೂ ಸಾವಿರಾರು ಲೀಟರ್ ನೀರನ್ನು ಭೂಮಿಯಿಂದ ಎಳೆದುಕೊಳ್ಳಲಾಗುತ್ತಿದೆ. ಇದೇ ಕಾರನಕ್ಕೆ ಇಂದು ಅಂತರ್ಜಲ ಮಟ್ಟ ಇಷ್ಟೊಂದು ಪ್ರಮಆಣದಲ್ಲಿ ಕುಸಿದಿದೆ.  ಕೊಳವೆ ಬಾವಿಗಳ ಅತಿಯಾದ ಬಲಕೆಯೇ ಅಂತರ್ಜಲ ಮಟ್ಟ ಕುಸಿಯುವುದಕ್ಕೆ ಕಾರಣ ಎನ್ನುವ ಮಾಜಿ ನೀರಾವರಿ ಇಲಾಖಾ ಕಾರ್ಯದರ್ಶಿ ಜಲ ತಜ್ಞ ಕ್ಯಾಪ್ಟನ್ ರಾಜಾ ರಾವ್ ರಾಜ್ಯದಲ್ಲಿ ಕರ್ನಾಟಕ ಅಂತರ್ಜಲ ನಿಯಂತ್ರಣ ಮತ್ತು ಅಭಿವೃದ್ಧಿ ನಿರ್ವಹಣೆ ಕಾಯಿದೆ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ.

Facebook Comments

Sri Raghav

Admin