ಇದು ಸ್ಮಾರ್ಟ್‍ಫೋನ್ ಅಲ್ಲ, ಡೆಡ್ಲಿ ಹ್ಯಾಂಡ್‍ಗನ್..!

ಈ ಸುದ್ದಿಯನ್ನು ಶೇರ್ ಮಾಡಿ

Smartphone-iphone-Gun

ಲಂಡನ್, ಜ.16-ಸೀಕ್ರೆಟ್ ಏಜೆಂಟ್ ಜೇಮ್ಸ್‍ಬಾಂಡ್-007 ಸಿನಿಮಾಗಳಲ್ಲಿ ಗ್ಯಾಡ್ಜೆಟ್‍ಗಳು ಶಸ್ತ್ರಾಸ್ರಗಳಾಗಿ ಪರಿವರ್ತನೆಗೊಂಡು ಎದುರಾಳಿಗಳನ್ನು ಫಿನಿಶ್ ಮಾಡುವ ದೃಶ್ಯಗಳನ್ನು ನೀವು ನೋಡಿರುತ್ತೀರಿ. ಈಗ ಸ್ಮಾರ್ಟ್‍ಫೋನ್ ಮಾದರಿಯಲ್ಲೇ ಇರುವ ಅತ್ಯಾಧುನಿಕ ಆದರೆ ಅಷ್ಟೇ ಅಪಾಯಕಾರಿ ಹ್ಯಾಂಡ್‍ಗನ್ ಆತಂಕ ಸೃಷ್ಟಿಸಿದೆ. ಇವು ಅಮೆರಿಕ ಮತ್ತು ಯುರೋಪ್‍ನಲ್ಲಿ ಕಳ್ಳಸಾಗಣೆಯಾಗುವ ಸಂಗತಿ ಪೊಲೀಸರ ನಿದ್ದೆಗೆಡಿಸಿದೆ.  ಇದು ಸ್ಮಾರ್ಟ್‍ಫೋನ್ ರೂಪದಲ್ಲಿರುವ ಹ್ಯಾಂಡ್‍ಗನ್‍ನ ಹೊಸ ಲುಕ್. ಅಮೆರಿಕದಲ್ಲಿ ಮಾರಾಟವಾಗುತ್ತಿರುವ ಎ.380 ಕ್ಯಾಲಿಬರ್ ಹ್ಯಾಂಡ್‍ಗನ್ ಯುರೋಪ್‍ಗೆ ಕಳ್ಳಸಾಗಣೆ ಮೂಲಕ ಬರಬಹುದು ಎಂಬ ಆತಂಕ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಸ್ಮಾರ್ಟ್‍ಫೋನ್ ಅಥವಾ ಐಫೋನ್‍ನಂತೆ ಕಾಣುವ ಇದು ಡಬಲ್ ಬ್ಯಾರೆಲ್ ಪಿಸ್ತೂಲ್ (ಜೋಡಿ ನಳಿಗೆ ರಿವಾಲ್ವರ್). ಇದು ಮೇಲ್ನೋಟಕ್ಕೆ ಸ್ಮಾರ್ಟ್‍ಫೋನ್. ಇದರ ಕೆಳಗಿನ ಹಿಡಿಕೆಯನ್ನು ತೆಗೆದರೆ ಎದುರಾಳಿ ಮೇಲೆ ಗುಂಡು ಹಾರಿಸುವ ಟ್ರಿಗರ್ ಗೋಚರಿಸುತ್ತದೆ. ಅಮೆರಿಕದ ಮಿನ್ನಿಸೋಟಾ ನಗರದಲ್ಲಿ ಈ ಹ್ಯಾಂಡ್‍ಗನ್‍ಗಳನ್ನು ಉತ್ಪಾದಿಸುತ್ತಿದ್ದು, ಬಿಡುಗಡೆಗೆ ಮುನ್ನವೇ ಅಪಾರ ಬೇಡಿಕೆ ಇದೆ.  ಈ ಸ್ಮಾರ್ಟ್‍ಫೋನ್..ಅಲ್ಲಲ್ಲ ಪಿಸ್ತೂಲ್‍ಗೆ ಐಡಿಯಲ್ ಕನ್ಸಿಲ್ (ರಹಸ್ಯ) ಹ್ಯಾಂಡ್‍ಗನ್‍ನ ಬೆಲೆ 395 ಡಾಲರ್‍ಗಳು ಎಂದು ಟೈಮ್ಸ್ ವರದಿ ಮಾಡಿದೆ. ಈಗಾಗಲೇ 15,000 ಕ್ಕೂ ಹೆಚ್ಚು ಜನರು ಉತ್ಪಾದನಾ ಪೂರ್ವ ಬೇಡಿಕೆ ಸಲ್ಲಿಸಿದ್ದಾರೆ. ಇನ್ನು ಮೂರು ತಿಂಗಳ ಒಳಗೆ ಈ ಹ್ಯಾಂಡ್‍ಗನ್ ಪೂರೈಕೆಯಾಗಲಿದೆ.

ಈ ಕನ್ಸೀಲ್ ಪಿಸ್ತೂಲ್‍ನನ್ನು ಸುಲಭವಾಗಿ ಬಚ್ಚಿಟ್ಟುಕೊಳ್ಳಬಹುದು. ಜೇಬು, ಪರ್ಸ್, ಬ್ಯಾಗ್‍ಪ್ಯಾಕ್-ಇವುಗಳಲ್ಲಿ ಹ್ಯಾಂಡ್‍ಗನ್‍ನನ್ನು ಇಟ್ಟುಕೊಳ್ಳಬಹುದು.  ಬೆಲ್ಜಿಯಂ ಸ್ಭೆರಿದಂತೆ ಐರೋಪ್ಯ ದೇಶಗಳಲ್ಲಿ ಭಯೋತ್ಪಾದಕರ ದಾಳಿ ಮತ್ತು ವಿಧ್ವಂಸಕ ಕೃತ್ಯಗಳ ಆತಂಕದ ನಡುವೆಯೇ ಈ ಸ್ಮಾರ್ಟ್‍ಫೋನ್ ಸೋಗಿನ ಹ್ಯಾಂಡ್‍ಗನ್ ಕಳ್ಳಸಾಗಣೆಯಾಗುವ ಹಿನ್ನೆಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin