ಇದೇ ಪ್ರಥಮ ಬಾರಿಗೆ ಫುಟ್ಬಾಲ್ ನಲ್ಲಿ ಚಿನ್ನ ಗೆದ್ದ ಬ್ರೆಜಿಲ್

ಈ ಸುದ್ದಿಯನ್ನು ಶೇರ್ ಮಾಡಿ

Football

ರಿಯೊ ಡಿ ಜನೈರೊ, ಆ.21- ರಿಯೋ ಒಲಂಪಿಕ್ ಕ್ರೀಡಾಕೂಟದಲ್ಲಿ ಅತಿಥೇಯ ಬ್ರೆಜಿಲ್ ಇದೇ ಪ್ರಥಮ ಬಾರಿಗೆ ಫುಟ್ಬಾಲ್ ಪಂದ್ಯದಲ್ಲಿ ಚಿನ್ನದ ಪದಕ ಜಯಿಸಿ ದಾಖಲೆ ನಿರ್ಮಿಸಿದೆ. ರಿಯೊದ ಮರಕಾನ ಕ್ರೀಡಾಂಗಣದಲ್ಲಿ ನಿನ್ನೆ ಮಧ್ಯರಾತ್ರಿ ನಡೆದ ಫೈನಲ್ ಹಣಾಹಣಿಯಲ್ಲಿ ಜಗದ್ವಿಖ್ಯಾತ ಆಟಗಾರ ನೈಮರ್ ಬಾರಿಸಿದ ಪೆನಾಲ್ಟಿ ಗೋಲಿನಿಂದ ಬ್ರೆಜಿಲ್ ಪ್ರಬಲ ಜರ್ಮನಿ ವಿರುದ್ಧ 5-4 ಶೂಟ್-ಔಟ್ನಲ್ಲಿ ರೋಮಾಂಚನಕಾರಿ ಜಯ ದಾಖಲಿಸಿತು.  ಇದರೊಂದಿಗೆ ವಿಶ್ವಕಪ್ ಸೆಮಿಫೈನಲ್ನಲ್ಲಿ 7-1 ಗೋಲ್ಗಳಿಂದ ಜರ್ಮನಿ ಎದುರು ಹೀನಾಯವಾಗಿ ಸೋತಿದ್ದ ಬ್ರೆಜಿಲ್ ಒಲಂಪಿಕ್ನಲ್ಲಿ ಭರ್ಜರಿಯಾಗಿಯೇ ಸೇಡು ತೀರಿಸಿಕೊಂಡಿತು.
ವಿಶ್ವ ಫುಟ್ಬಾಲ್ನಲ್ಲಿ ಐದು ಬಾರಿ ಚಾಂಪಿಯನ್ ಆಗಿದ್ದ ಬ್ರೆಜಿಲ್ ಒಲಂಪಿಕ್ ಕ್ರೀಡಾಕೂಟದಲ್ಲಿ ಬಂಗಾರದ ಪದಕ ಗೆಲ್ಲುತ್ತಿರುವುದು ಇದೇ ಮೊದಲು.  ಪೆನಾಲ್ಟಿಯಲ್ಲಿ ನೈಮರ್ ಗೆಲುವಿನ ಗೋಲ್ ಬಾರಿಸುತ್ತಿದ್ದರೆ ಕ್ರೀಡಾಭಿಮಾನಿಗಳು ಕ್ರೀಡಾಂಗಣದಲ್ಲಿ ಕುಣಿದು ಕುಪ್ಪಳಿಸಿದರು. ಒಲೆ ಒಲೆ ಒಲೆ ನೈಮರ್ ಎಂಬ ಸಾಲುಗಳು ಮೊಳಗಿದವು.

► Follow us on –  Facebook / Twitter  / Google+

Facebook Comments

Sri Raghav

Admin