ಇದೇ ಮೊದಲ ಬಾರಿಗೆ ಪದ್ಮ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲು ಸಾರ್ವಜನಿಕರಿಗೆ ಅವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

Padma-awards

ನವದೆಹಲಿ, ಸೆ.10-ಪ್ರತಿಷ್ಠಿತ ಪದ್ಮ ಪ್ರಶಸ್ತಿಗೆ ಸಾಧಕರ ಹೆಸರನ್ನು ಶಿಫಾರಸ್ಸುಗೊಳಿಸಲು ಸರ್ಕಾರ ಸಾರ್ವಜನಿಕರಿಗೆ ಅವಕಾಶ ನೀಡಿದೆ. ಶಿಫಾರಸ್ಸು ಪ್ರಕ್ರಿಯೆ, ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಲು ಸರ್ಕಾರ ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಿದೆ. ನಾಮಾಂಕಿತ ಪ್ರಕ್ರಿಯೆಯನ್ನು ಆನ್‍ಲೈನ್‍ನಲ್ಲಿ ಮಾಡಬಹುದು, ನಾಮಾಂಕಿತದಾರರು ತಮ್ಮ ಆಧಾರ್ ಕಾರ್ಡ್ ವಿವರವನ್ನು ಸಲ್ಲಿಸಬೇಕು.  ಪದ್ಮ ಪ್ರಶಸ್ತಿಗೆ ಸಾಧಕರನ್ನು ಶಿಫಾರಸ್ಸು ಮಾಡಲು ಇದೇ ಮೊದಲ ಬಾರಿಗೆ ಸರ್ಕಾರ ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿದೆ. ಪ್ರಶಸ್ತಿ ಆಯ್ಕೆಯನ್ನು ಪಾರದರ್ಶಕಗೊಳಿಸಲು ಮತ್ತು ನಿಜವಾದ ಸಾಧಕರಿಗೆ ಪ್ರಶಸ್ತಿ ಸಲ್ಲುವಂತೆ ಮಾಡಲು ಈ ರೀತಿ ಮಾಡಲಾಗಿದೆ ಎಂದು ಗೃಹ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ.

ಸರ್ಕಾರ ಈಗಾಗಲೇ 1700 ಶಿಫಾರಸ್ಸು ಹೆಸರುಗಳನ್ನು ಸ್ವೀಕರಿಸಿದೆ. ಹೆಸರನ್ನು ಸಲ್ಲಿಸಲು ಇದೇ ತಿಂಗಳ 15 ಕೊನೆಯ ದಿನಾಂಕವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin