ಇದೇ ವಿಧಿಯಾಟವೇ..? : ಕ್ಯಾನ್ಸರನ್ನೇ ಗೆದ್ದ ಭಾರತಿಯನ್ನು ನುಂಗಿಹಾಕಿದ ವರುಣ..!

ಈ ಸುದ್ದಿಯನ್ನು ಶೇರ್ ಮಾಡಿ

Bharati--014

ಬೆಂಗಳೂರು, ಸೆ.9-ವಿಧಿಯಾಟವೇ ಹೀಗೇ… ಮಾರಕ ರೋಗ ಕ್ಯಾನ್ಸರನ್ನು ಗೆದ್ದಿದ್ದ ಭಾರತಿ ಸಾವನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಿನ್ನೆ ಸುರಿದ ಭಾರೀ ಮಳೆಗೆ ಬಲಿಯಾದ ರಮೇಶ್, ಭಾರತಿ, ಜಗದೀಶ್ ಮೂವರ ಪೈಕಿ ಭಾರತಿಗೆ ಬ್ಲಡ್ ಕ್ಯಾನ್ಸರ್ ಇತ್ತು. ಕಳೆದ ವರ್ಷವಷ್ಟೇ ಈ ರೋಗದಿಂದ ಗುಣಮುಖರಾಗಿ ಹೊರಬಂದಿದ್ದರು.

ಆದರೆ ವಿಧಿಯಾಟವೇ ಬೇರೆಯಾಗಿತ್ತು. ನಿನ್ನೆ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆ ಸಂದರ್ಭದಲ್ಲಿ ತಾವು ಇದ್ದ ಕಾರಿನ ಮೇಲೆ ಭಾರೀ ಗಾತ್ರದ ಮರಬಿದ್ದು ತನ್ನ ತಮ್ಮ, ತಾನು ಪ್ರೀತಿಸಿ ಮದುವೆಯಾಗಿದ್ದ ಪತಿಯೊಂದಿಗೆ ಇಹಲೋಕ ತ್ಯಜಿಸಿದ್ದಾರೆ. 23 ವರ್ಷಗಳ ಹಿಂದೆ ರಮೇಶ್-ಭಾರತಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಪತ್ನಿಗೆ ಕ್ಯಾನ್ಸರ್ ಇದೆ ಎಂದು ಗೊತ್ತಾದಾಗ ಆಕಾಶವೇ ಕಳಚಿ ಬಿದ್ದಂತಾಗಿತ್ತು. ಆದರೆ ಧೃತಿಗೆಡದೆ 8 ಲಕ್ಷ ಸಾಲ ಮಾಡಿ ರಮೇಶ್,ತನ್ನ ಪತ್ನಿ ಕ್ಯಾನ್ಸರ್ ಗುಣಪಡಿಸಿದ್ದರು. ಕ್ಯಾನ್ಸರ್ ರೋಗದಿಂದ ಭಾರತಿ ಗೆದ್ದಿದ್ದರು. ಕುಟುಂಬದ ನಿರ್ವಹಣೆ ಮತ್ತು ಸಾಲಕ್ಕಾಗಿ ಕಳೆದ ಮೂರು ವರ್ಷಗಳಿಂದ ಗೃಹರಕ್ಷಕ ದಳದಲ್ಲಿ ಕೆಲಸ ಮಾಡುತ್ತಿದ್ದರು. ರಾಹುಲ್ ಮತ್ತು ರೋಹಿತ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.

Facebook Comments

Sri Raghav

Admin