ಇನ್ನು ಮುಂದೆ ಭಾರತೀಯರು ಅಮೆರಿಕದಲ್ಲಿ ನೌಕರಿ ಗಿಟ್ಟಿಸುವುದು ಅಷ್ಟು ಸುಲಭವಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

Trump-01

ವಾಷಿಂಗ್ಟನ್, ಡಿ.10- ನಮ್ಮ ದೇಶದ ಉದ್ಯೋಗಿಗಳ ನೌಕರಿಯನ್ನು ಕಿತ್ತುಕೊಳ್ಳಲು ಎಚ್1-ಬಿ ವೀಸಾ ಹೊಂದಿರುವ ವಿದೇಶಿ ನೌಕರರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇನ್ನು ಮುಂದೆ ಭಾರತೀಯ ಉದ್ಯೋಗಿಗಳು ಅಮೆರಿಕದಲ್ಲಿ ನೌಕರಿ ಗಿಟ್ಟಿಸುವುದು ಅಷ್ಟು ಸುಲಭವಲ್ಲ ಎಂಬ ಸ್ಪಷ್ಟ ಎಚ್ಚರಿಕೆಯನ್ನೂ ಈ ಮೂಲಕ ಅವರು ನೀಡಿದ್ದಾರೆ.

ಲೋವಾದಲ್ಲಿ ತಮ್ಮ ಸಾವಿರಾರು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಮೆರಿಕದ ಪ್ರತಿಯೊಬ್ಬ ಪ್ರಜೆಯ ಜೀವನ ನಮಗೆ ಮುಖ್ಯ. ಅದನ್ನು ರಕ್ಷಿಸಲು ನಾವು ಬದ್ಧವಾಗಿದ್ದೇವೆ. ಇದಕ್ಕಾಗಿ ನಾವು ಹೋರಾಟ ನಡೆಸುತ್ತೇವೆ. ಈ ನಿಟ್ಟಿನಲ್ಲಿ ಯಾವುದೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧ ಎಂದು ಟ್ರಂಪ್ ಹೇಳಿದರು.  ಡಿಸ್ನಿ ವಲ್ರ್ಡ್ ಸೇರಿದಂತೆ ಅಮೆರಿಕದ ಇತರ ಕಂಪನಿಗಳನ್ನು ಕೆಲಸ ಗಿಟ್ಟಿಸಿರುವ ಅಸಂಖ್ಯಾತ ಭಾರತೀಯರನ್ನು ಪರೋಕ್ಷವಾಗಿ ಉಲ್ಲೇಖಿಸಿದ ಅವರು ನಮ್ಮವರ ನೌಕರಿ ಕಸಿದುಕೊಳ್ಳಲು ಅನ್ಯ ರಾಷ್ಟ್ರೀಯರಿಗೆ ಆಸ್ಪದ ನೀಡುವುದಿಲ್ಲ ಎಂದು ತಿಳಿಸಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin