ಇನ್ನೂ ಇಬ್ಬರು ಸಚಿವರು ಹಾಗೂ ಮೂವರು ಶಾಸಕರ ಬಣ್ಣ ಬಯಲು ಮಾಡ್ತಾರಂತೆ ರಾಜಶೇಖರ್..!

ಈ ಸುದ್ದಿಯನ್ನು ಶೇರ್ ಮಾಡಿ

Rajashekha-01

ನವದೆಹಲಿ.ಡಿ.14,: ಮಾಜಿ ಸಚಿವ ಎಚ್ ವೈ ಮೇಟಿ ರಾಸಲೀಲೆ ವಿಡಿಯೋ ಜಗಜ್ಜಾಹೀರಾಗಿದ್ದು, ಇನ್ನು ಇಬ್ಬರು ಸಚಿವರು ಹಾಗೂ ಮೂವರು ಶಾಸಕರ ಭ್ರಷ್ಟಾಚಾರವನ್ನು ಶೀಘ್ರದಲ್ಲೆ ಬಹಿರಂಗ ಮಾಡುವೆ ಎಂದು ವಿಡಿಯೋ ಬಿಡುಗಡೆ ಮಾಡಿದ ಆರ್.ಟಿಐ ಕಾರ್ಯಕರ್ತ ರಾಜಶೇಖರ್ ತಿಳಿಸಿದ್ದಾರೆ. ಇಂದು ನವದೆಹಲಿಯಲ್ಲಿ ಮಾತನಾಡಿದ ರಾಜಶೇಖರ್ ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳೆಯರಿಗೆ ಯಾವುದೇ ಗೌರವವಿಲ್ಲ. ನಿನ್ನೆ ಗೃಹ ಸಚಿವ ಪರಮೇಶ್ವರ್ ಭೇಟಿಗೆ ಹೋಗಿದ್ದದ ವೇಳೆ ನನಗೆ ಅವಕಾಶ ನೀಡಲಿಲ್ಲ. ನಿನ್ನಂಥವರನ್ನು ನಾವು ತುಂಬಾ ಜನರನ್ನು ನೋಡಿದ್ದೇವೆ ಎಂದು ಹೇಳಿದ್ದರು. ನಾನು ಹೋರಾಟವನ್ನು ಮುಂದುವರಿಸುತ್ತೇನೆ ಎಂದರು.

ಸರ್ಕಾರದ ಒಂದೊಂದೆ ಹಗರಣವನ್ನು ಬಿಚ್ಚಿಡುವೆ ಎಂದು ಹೇಳಿದ ರಾಜಶೇಖರ್ ಹೆಚ್ ವೈ ಮೇಟಿ ಅವರನ್ನ ಸಮರ್ಥಿಸಿಕೊಂಡಿದ್ದ ಸಚಿವರೆಲ್ಲರೂ ರಾಜೀನಾಮೆ ನೀಡಬೇಕು. ಮೇಟಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin