ಇನ್ನೂ ಎದ್ದಿಲ್ಲ ‘ಸಿದ್ದ’ : ಆರೋಗ್ಯ ಸ್ಥಿರ, ಮುಂದುವರೆದ ಚಿಕಿತ್ಸೆ

ಈ ಸುದ್ದಿಯನ್ನು ಶೇರ್ ಮಾಡಿ

Sidda-elephant-Manchanabele

ಮಾಗಡಿ, ನ.6- ತಾಲ್ಲೂಕಿನ ಮಂಚನಬೆಲೆ ಜಲಾಶಯದ ಹಿನ್ನೀರಿನ ಅವ್ವೇರಹಳ್ಳಿ ಬಳಿ ವಿರಮಿಸುತ್ತಿರುವ ಕಾಡಾನೆ ಸಿದ್ದನ ಆರೋಗ್ಯ ಸ್ಥಿರವಾಗಿದೆ ಎಂದು ವಲಯ ಅರಣ್ಯ ಅಧಿಕಾರಿ ದಾಳೇಶ್ ತಿಳಿಸಿದ್ದಾರೆ. ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾಡಾನೆ ಸಿದ್ದನ ಆರೋಗ್ಯಗ ಮೇಲೆ ನಿಗಾವಹಿಸಲು ಸಮಿತಿ ರಚಿಸಲಾಗಿದೆ. ಸಿದ್ದನ ಆರೋಗ್ಯ ಸುಧಾರಣೆಗೆ ಡಾ.ನಿತಿನ್ ತಂಡದವರು ಸ್ಥಳದಲ್ಲೆ ಮೊಕ್ಕಾಂ ಹೂಡಿದ್ದಾರೆ. ಸಿದ್ದನಿಗೆ ನಿತ್ಯ ಆಹಾರ ನೀಡಲಾಗುತ್ತಿದೆ. ವನಪಾಲಕರಾದ ಬಸವರಾಜು, ದೊಡ್ಡಯ್ಯ ತಂಡದವರು ಸಿದ್ದನ ಹಾರೈಕೆಯಲ್ಲಿ ನಿರತರಾಗಿದ್ದಾರೆ, ಸಿದ್ದನ ಆರೋಗ್ಯದ ಬಗ್ಗೆ ಸಂಘ ಸಂಸ್ಥೆಗಳವರು ವಿನಾಕಾರಣ ಸುಳ್ಳು ಸುದ್ದಿ ಹಬ್ಬಿಸಬಾರದು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin