ಇನ್ನೂ ಸಿಗದ ಬಾಂಬ್ ‘ನಾಗ’, ಬಿಲಗಳಲ್ಲಿ ಪೊಲೀಸರ ಹುಡುಕಾಟ

ಈ ಸುದ್ದಿಯನ್ನು ಶೇರ್ ಮಾಡಿ

Bomb-Naga--01

ಬೆಂಗಳೂರು, ಏ.15- ಮನೆ ಮೇಲೆ ಪೊಲೀಸರು ದಾಳಿ ನಡೆಸಿ 24 ಗಂಟೆ ಕಳೆದರೂ ಪಾಲಿಕೆ ಮಾಜಿ ಸದಸ್ಯ ವಿ.ನಾಗರಾಜ್ ಅಲಿಯಾಸ್ ಬಾಂಬ್‍ನಾಗ ಇನ್ನೂ ಸಿಕ್ಕಿಲ್ಲ. ಅವನಿಗಾಗಿ ಬೆಂಗಳೂರು ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಆತನ ಬಂಧನಕ್ಕಾಗಿ ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಕಾರ್ಯಾಚರಣೆ ನಡೆಸುತ್ತಿವೆ.  ದಾಬಸ್‍ಪೇಟೆ, ನೆಲಮಂಗಲ, ದೇವನಹಳ್ಳಿಗಳಲ್ಲಿ ಎರಡು ತಂಡ ನಾಗನಿಗಾಗಿ ಶೋಧ ನಡೆಸುತ್ತಿದ್ದರೆ, ಮತ್ತೊಂದು ತಂಡ ತಮಿಳುನಾಡಿನ ಧರ್ಮಪುರಿಯಲ್ಲಿ ಶೋಧ ಕಾರ್ಯ ಕೈಗೊಂಡಿದೆ.

ನಿನ್ನೆ ಪೊಲೀಸರು ನಾಗನ ಮನೆ ಮೇಲೆ ದಾಳಿ ನಡೆಸುವಾಗ ಆತ ಮನೆಯಲ್ಲಿ ಇರಲಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟ ಪಡಿಸಿದ್ದಾರೆ.
ನಿನ್ನೆ ಮುಂಜಾನೆಯಿಂದ ದಾಳಿ ನಡೆಸಿದ ಪೊಲೀಸರು ಸಂಜೆವರೆಗೂ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ನಾಗನ ಮನೆ, ಕಚೇರಿಯಲ್ಲಿ 14.80 ಕೋಟಿ ರೂ. ಮೊತ್ತದ ಹಳೇ 500 ಹಾಗೂ 1000 ರೂ.ಗಳ ನೋಟುಗಳು ಪತ್ತೆಯಾಗಿತ್ತು.

ಬ್ಲಾಕ್ ಆ್ಯಂಡ್ ವೈಟ್ ದಂಧೆ ನಡೆಸುತ್ತಿದ್ದ ನಾಗ ಹಣಬದಲಿಸಲು ಬಂದವರನ್ನು ಬೆದರಿಸಿ ಅವರ ಬಳಿಯಿದ್ದ ಹಣ ಕಸಿದು ಕಳುಹಿಸುತ್ತಿದ್ದ ಎನ್ನಲಾಗಿದೆ.
ಈತನ ಬಳಿ ವ್ಯವಹಾರ ನಡೆಸುತ್ತಿದ್ದ ಉಮೇಶ್ ಜತೆ ಪರ್ಸಂಟೇಜ್ ವಿಚಾರವಾಗಿ ವೈಮನಸ್ಸು ಉಂಟಾಗಿದ್ದರಿಂದ ಉಮೇಶ್ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್‍ನಿಂಬಾಳ್ಕರ್ ಅವರಿಗೆ ದೂರು ನೀಡಿದ್ದರು.  ಕಳೆದ 15 ದಿನಗಳ ಹಿಂದೆ ಸಿಸಿಬಿ ಪೊಲೀಸರು ದಾಳಿ ನಡೆಸಿ ವೀರಣ್ಣ ಮತ್ತಿಕಟ್ಟಿ ಅವರ ಅಳಿಯ ಪ್ರವೀಣ್‍ಕುಮಾರ್ ಸೇರಿದಂತೆ ಹಲವರನ್ನು ಬಂಧಿಸಿದಾಗ ಉಮೇಶ್ ಸಹ ಬಂಧಿತರಾಗಿದ್ದರು.  ಒಂದು ಕೋಟಿ ಹಣ ಬದಲಾಯಿಸಲು ಬಂದಿದ್ದಾಗ ನಾಗ ಉಮೇಶ್ ಅವರನ್ನು ಬೆದರಿಸಿ ಅವರಿಂದ ಹಣ ಕಸಿದುಕೊಂಡಿದ್ದರಿಂದ ಉಮೇಶ್ ದೂರು ನೀಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin