ಇನ್ನೂ 15 ದಿನ ಜಿಯೋ ಉಚಿತ ಸೇವೆ, ಬಿಎಸ್ಎನ್ಎಲ್’ನಿಂದಲೂ ಬಂತು ಭರ್ಜರಿ ಆಫರ್..!

ಈ ಸುದ್ದಿಯನ್ನು ಶೇರ್ ಮಾಡಿ

Jio-01

ಹೊಸದಿಲ್ಲಿ. ಏ.01 : ಮಾರ್ಚ್ 31ರ ಮಧ್ಯರಾತ್ರಿಗೆ ಮುಗಿಯಬೇಕಿದ್ದ ಜಿಯೋ ಪ್ರೈಂ ಸೇವೆಗೆ ನೋಂದಣಿ ಯಾಗಲು ವಿಧಿಸಿದ್ದ ಮಾ.31ರ ಗಡುವನ್ನು ರಿಲಾಯನ್ಸ್ ಜಿಯೋ ಸಂಸ್ಥೆ 15 ದಿನಗಳ ಕಾಲ ವಿಸ್ತರಿಸಿದೆ. ಇದರ ಜೊತೆಗೆ ಸೂಪರ್ ಸಮ್ಮರ್ ಎಂಬ ಹೊಸ ಆಫರ್ ಪ್ಲಾನ್ ಘೋಷಿಸಿದ್ದು ಪ್ರೈಂ ಮೆಂಬರ್ ಶಿಪ್ ಗೆ ರೂ. 99 ಜೊತೆ ಗ್ರಾಹಕರು 303 ರೂ. ರೀಚಾರ್ಜ್ ಮಾಡಿಸಿಕೊಂಡಲ್ಲಿ 3 ತಿಂಗಳುಗಳ ಕಾಲ ಉಚಿತ ಕೆರೆ ಮತ್ತು ಇಂಟರ್ನೆಟ್ ಸೌಲಭ್ಯ ದೊರೆಯಲಿದೆ. ಪ್ರೈಂ ಮೆಂಬರ್ ಶಿಪ್ ಪಡೆಯಲು  ಎ.15ರವರೆಗೆ ಕೊನೆಯ ದಿನವಾಗಿದೆ. ಅಲ್ಲಿಯವರೆಗೆ ಜಿಯೋ ಉಚಿತ ಸೇವೆ ಮುಂದುವರೆಯಲಿದೆ.

ಗ್ರಾಹಕರ ಬಹು ಬೇಡಿಕೆಯ ಮೇರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಸಂಸ್ಥೆ ಹೇಳಿದೆ. ಈಗಾಗಲೇ ಪ್ರೈಮ್ ಮೆಂಬರ್ ಶಿಪ್ ಪಡೆದ ಗ್ರಾಹಕರಿಗೆ 3 ತಿಂಗಳ ಸೇವೆ ಉಚಿತವಾಗಿ ದೊರಕಲಿದೆ. ಈಗ ರಿಚಾರ್ಜ್ ಮಾಡಿದ 303 ರೂ. ಅಥವಾ ಹೆಚ್ಚುವರಿ ಮೊತ್ತದ ಪ್ಲ್ಯಾನ್ ಜುಲೈನಿಂದ ಜಾರಿಗೆ ಬರಲಿದೆ ಎಂದು ಸಂಸ್ಥೆ ಹೇಳಿದೆ. 72 ಮಿಲಿಯನ್‍ಗೂ ಅಧಿಕ ಮಂದಿ ಜಿಯೋ ಗ್ರಾಹಕರು ಪ್ರೈಮ್ ಮೆಂಬರ್‌ಶಿಪ್ ಪಡೆದಿದ್ದಾರೆಂದು ಪ್ರಕಟಿಸಿದೆ.

ಬಿಎಸ್ಎನ್ಎಲ್ ಭರ್ಜರಿ ಆಫರ್ :

ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ ನಿಗಮ ಲಿ. (ಬಿಎಸ್ಎನ್ಎಲ್) ಇದೀಗ 249 ರೂ.ಗೆ ಮಾಸಿಕ 300ಜಿಬಿ ಡಾಟಾ ಆಫರ್ ಪ್ರಕಟಿಸಿದೆ. ಈ ಆಫರ್ ಪ್ರಕಾರ ಗ್ರಾಹಕರು ಭಾನುವಾರದಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ಯಾವುದೇ ನೆಟ್ವರ್ಕ್ ಗೆ ಉಚಿತ ಅನಿಯಮಿತ ಕರೆ ಮಾಡಬಹುದಾಗಿದೆ. “ಅನ್ಲಿಮಿ ಟೆಡ್ ಬ್ರಾಡ್ಬ್ಯಾಂಡ್ ಎಟ್ 249′ ಹೆಸರಿ ಆಫರ್ ಇದಾಗಿದ್ದು, ದಿನಕ್ಕೆ 10 ಜಿಬಿ ವರೆಗೆ ಡಾಟಾ ಡೌನ್ಲೋಡ್ ಮಾಡಿಕೊಳ್ಳಬಹುದು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin