ಇನ್ನೆರಡು ದಿನಗಳಲ್ಲಿ ಉತ್ತಮ ಮಳೆ ನಿರೀಕ್ಷೆ..?

ಈ ಸುದ್ದಿಯನ್ನು ಶೇರ್ ಮಾಡಿ

Wethwer

ಬೆಂಗಳೂರು, ಆ.21- ರಾಜ್ಯದಲ್ಲಿ ಇನ್ನೆರಡು ದಿನಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಗಳು ಕಂಡುಬರುತ್ತಿವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದರು.   ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು ಅದು ದುರ್ಬಲಗೊಂಡರೆ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ. ಅದೇ ರೀತಿ ಅರಬ್ಬಿಸಮುದ್ರದಲ್ಲೂ ಕೂಡ ಬದಲಾವಣೆಯಾಗುತ್ತಿದೆ. ಉತ್ತಮ ಮಳೆ ನಿರೀಕ್ಷಿಸಬಹುದಾಗಿದೆ. ಆ.23ರಿಂದ ನಾಲ್ಕು ದಿನಗಳ ಕಾಲ ರಾಜ್ಯದ ಒಳನಾಡಿನಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದರು.   ಆದರೆ ಬಂಗಾಳಕೊಲ್ಲಿಯಲ್ಲಿ ಉಂಟಾಗುತ್ತಿರುವ ವಾಯುಭಾರ ಕುಸಿತ ಉತ್ತರಭಾರತದ ಕಡೆ ಚಲಿಸುತ್ತಿವೆ. ಅಲ್ಲಿ ಭಾರೀ ಮಳೆಯಾಗುತ್ತಿದೆ ಜೊತೆಗೆ ವಾಯುಭಾರ ಕುಸಿತ ಪ್ರಬಲಗೊಂಡಿರುವುದರಿಂದ ದಕ್ಷಿಣ ಭಾರತದ ಭಾಗದಲ್ಲಿರುವ ತೇವಾಂಶವನ್ನೆಲ್ಲ ಸೆಳೆದುಕೊಳ್ಳುತ್ತವೆ. ಇದರಿಂದಾಗಿ ರಾಜ್ಯದಲ್ಲಿ ಮಳೆ ಕೊರತೆ ಕಂಡುಬರುತ್ತಿದೆ.
ಮುಂದೆ ಉಂಟಾಗಲಿರುವ ವಾಯುಭಾರ ಕುಸಿತ ಕೂಡ ಪ್ರಬಲಗೊಂಡು ಶಕ್ತಿಶಾಲಿಯಾದರೆ ಮತ್ತೆ ಮಳೆ ಅಭಾವವನ್ನು ರಾಜ್ಯ ಎದುರಿಸುವಂತಾಗುತ್ತದೆ. ಆಗಸ್ಟ್ ಕೊನೆಯ ವಾರದಲ್ಲಿ ಉತ್ತಮ ಮಳೆಯಾಗುವ ಲಕ್ಷಣಗಳಿದ್ದು ಕೊನೆ ಘಳಿಗೆಯಲ್ಲಿ ವಾತಾವರಣದಲ್ಲಿ ಯಾವ ಬದಲಾವಣೆ ಉಂಟಾಗುವುದೋ ಕಾದು ನೋಡಬೇಕು.

ಸಂಕಷ್ಟದ ನೀರು:

ಕಾವೇರಿ ಜಲಾಯನ ಭಾಗದ ಜಲಾಶಯಗಳಲ್ಲಿ ನೀರಿನ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಕಾವೇರಿ ನ್ಯಾಯಾಧೀಕರಣ ನಿಗದಿಪಡಿಸಿರುವ ಪ್ರಮಾಣದಲ್ಲಿ ನೀರು ಬಿಡಲು ಸಾಧ್ಯವಾಗುತ್ತಿಲ್ಲ. ನಿಗದಿಪಡಿಸಿರುವ ಪ್ರಮಾಣದಷ್ಟು ಕೂಡ ಜಲಾಶಯದಲ್ಲಿ ನೀರಿಲ್ಲ. ಆದರೂ ಸಂಕಷ್ಟ ಸೂತ್ರದ ಪ್ರಕಾರ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ.
ರಾಜ್ಯ ಎದುರಿಸುತ್ತಿರುವ ಜಲಕ್ಷಾಮದಿಂದಾಗಿ ತಮಿಳುನಾಡು ಕೂಡ ಸಂಕಷ್ಟವನ್ನು ಹಂಚಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಒದಗಿಬಂದಿದೆ. ಸೆಪ್ಟೆಂಬರ್ನಲ್ಲಿ ವರುಣ ಕೃಪೆ ತೋರಿದರೆ ಮಾತ್ರ ನೀರಿನ ದಾಹ ತಣಿಸಲು ಸಾಧ್ಯ. ಇಲ್ಲದಿದ್ದರೆ ಸಂಕಷ್ಟವನ್ನೇ ಹಂಚಿಕೊಳ್ಳಬೇಕು.

► Follow us on –  Facebook / Twitter  / Google+

Facebook Comments

Sri Raghav

Admin