ಇನ್ನೆರೆಡು ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಉಪನ್ಯಾಸಕ ನೇಣಿಗೆ ಶರಣು

ಈ ಸುದ್ದಿಯನ್ನು ಶೇರ್ ಮಾಡಿ

Suicide-01

ಚಿಕ್ಕಮಗಳೂರು,ಫೆ.9-ಇನ್ನೆರಡು ದಿನದಲ್ಲಿ ಹಸೆಮಣೆ ಏರಬೇಕಿದ್ದ ಉಪನ್ಯಾಸಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪವನ್(28) ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕ. ನಗರದ ಆದಿಚುಂಚನಗಿರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಉಪನ್ಯಾಸಕರಾದ ಪವನ್‍ಗೆ ಫೆಬ್ರವರಿ 12ರಂದು ಮದುವೆ ನಿಶ್ಚಯವಾಗಿತ್ತು. ನಿನ್ನೆ ಮದುವೆಗೆ ಸಂಬಂಧಪಟ್ಟಂತೆ ದೇವತಾ ಕಾರ್ಯಗಳ ಸಿದ್ದತೆ ನಡೆದಿತ್ತು.   ಮದುವೆಯ ಹಿನ್ನೆಲೆಯಲ್ಲಿ ಪವನ್ ನಿನ್ನೆ ಮಧ್ಯಾಹ್ನ ತಮ್ಮ ಸ್ನೇಹಿತರಿಗೆ ಔತಣಕೂಟವನ್ನು ಏರ್ಪಡಿಸಿದ್ದರು.

ಊಟ ಮುಗಿಸಿ ಮನೆಗೆ ಬಂದ ಪವನ್ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.   ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin