ಇನ್ನೊಂದು ಪದಕನಿರೀಕ್ಷೆಯಲ್ಲಿ ಭಾರತೀಯರು : ಎಲ್ಲರ ಚಿತ್ತ ಯೋಗೇಶ್ವರ್ ನತ್ತ

ಈ ಸುದ್ದಿಯನ್ನು ಶೇರ್ ಮಾಡಿ

Yogishwar-a

ರಿಯೊ ಡಿ ಜನೈರೋ, ಆ.21-ಭರವಸೆಯ ಕುಸ್ತಿಪಟು ಯೋಗೇಶ್ವರ್ ದತ್ ಮೇಲೆ ಈಗ ಎಲ್ಲರ ದೃಷ್ಟಿ ಕೇಂದ್ರೀಕೃತವಾಗಿದೆ. ಭಾರತದ ಪುರುಷರ ವಿಭಾಗದಲ್ಲಿ ಒಂದೇ ಒಂದು ಪದಕ ಬಂದಿಲ್ಲ. ಹೀಗಾಗಿ ದತ್ ಆ ಕೊರಗು-ಕೊರತೆಯನ್ನು ನೀಗಿಸುವರೇ? ಎಂಬ ನಿರೀಕ್ಷೆಯಲ್ಲಿ ದೇಶದ 120 ಕೋಟಿ ಜನ ಇದ್ದಾರೆ.   74 ಕೆ.ಜಿ ವಿಭಾಗದ ಕುಸ್ತಿಯಲ್ಲಿ ಸ್ಪರ್ಧಿಸಬೇಕಿದ್ದ ನರಸಿಂಗ್ ಯಾದವ್ ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ನಾಲ್ಕು ವರ್ಷಗಳ ನಿಷೇಧಕ್ಕೆ ಒಳಗಾಗಿದ್ದಾರೆ. ಇದರಿಂದಾಗಿ ಹರ್ಯಾಣದ 33 ವರ್ಷದ ಕುಸ್ತಿಪಟು ಯೋಗೇಶ್ವರ್ ದತ್ ಮೇಲೆ ಭಾರೀ ನಿರೀಕ್ಷೆ ಮತ್ತು ಭರವಸೆ ಮೂಡಿದೆ.  ರಿಯೋದಲ್ಲಿ ಇಂದು 65 ಕೆಜಿ ವಿಭಾಗದ ಕುಸ್ತಿಯಲ್ಲಿ ದತ್ ಇಂದು ಅಖಾಡಕ್ಕೆ ಇಳಿಯಲಿದ್ದಾರೆ. ಅವರು ವಿಶ್ವಚಾಂಪಿಯನ್ ಕುಸ್ತಿಪಟು ಇಟಲಿಯ ಫ್ರಾಂಕ್ ಚಮಿಚೊ ಮತ್ತು ರಷ್ಯಾದ ಪ್ರಬಲ ಪೈಲ್ವಾನ್ ಸೊಸ್ತಾನ್ ರೊಮೊನೇವ್ ಅವರನ್ನು ಎರಡು ಚೌಟ್ಗಳಲ್ಲಿ ಎದುರಿಸಲಿದ್ದಾರೆ.

ಒಲಿಂಪಿಕ್ ಕ್ರೀಡಾಕೂಟದ ಕೊನೆ ದಿನದಂದು ಭಾರತಕ್ಕೆ ಅವರು ಇನ್ನೊಂದು ಪದಕದ ಉಡುಗೊರೆ ನೀಡಲಿದ್ದಾರೆಂಬ ಭರವಸೆಯ ಬೆಳಕು ಸಹ ಮೂಡಿದೆ.   ಯೋಗೇಶ್ವರ್ ದತ್ 2004ರ ಅಥೆನ್ಸ್ ಒಲಿಂಪಿಕ್ನಲ್ಲಿ ಸ್ಫರ್ಧಿಸಿದ್ದರು. 2008ರ ಬೀಜಿಂಗ್ ಒಲಿಂಪಿಕ್ನಲ್ಲಿ ಅಖಾಡದಲ್ಲಿ ಸೆಣಸಿದ್ದರು. 2012ರಲ್ಲಿ ಅವರು ಕಂಚು ಪದಕ ಜಯಿಸಿ, ದೇಶಕ್ಕೆ ಕೀರ್ತಿ ತಂದಿದ್ದರು.   ಕಾಮನ್ವೆಲ್ತ್ ಕ್ರೀಡಾಕೂಟಗಳು ಮತ್ತು ಏಷ್ಯನ್ ಗೇಮ್ಸ್ಗಳಲ್ಲಿ ಅವರು ಉತ್ತಮ ಪ್ರದರ್ಶನ ನೀಡಿ ಪದಕಗಳನ್ನು ಗಳಿಸಿ ಭರವಸೆ ಮೂಡಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin