ಇನ್ಫೋಸಿಸ್‍ಗೆ 3,606 ಕೋಟಿ ರೂ. ನಿವ್ವಳ ಲಾಭ

ಈ ಸುದ್ದಿಯನ್ನು ಶೇರ್ ಮಾಡಿ

Infosys

ಬೆಂಗಳೂರು, ಅ.14-ಮಾಹಿತಿ ತಂತ್ರಜ್ಞಾನದ ಮುಂಚೂಣಿ ಸಂಸ್ಥೆ ಇನ್ಫೋಸಿಸ್ ಸೆಪ್ಟೆಂಬರ್ ತ್ರೈಮಾಸಿಕ ಅವಧಿಗೆ 3,606 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದ್ದು, ಶೇಕಡ 6.1ರಷ್ಟು ಪ್ರಗತಿ ಸಾಧಿಸಿದೆ. ಇನ್ಫೋಸಿಸ್ ಕಳೆದ ವರ್ಷ ಇದೇ ಅವಧಿಯಲ್ಲಿ 3,398 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿತ್ತು. ಇತ್ತೀಚಿನ ಸಾಧನೆ ಮತ್ತು ಸನಿಹ-ಅವಧಿ ಅನಿಶ್ಚಿತ ವಾಣಿಜ್ಯ ದೃಷ್ಟಿಕೋನದಿಂದಾಗಿ ಈ ವರ್ಷದಲ್ಲಿ ಎರಡನೇ ಬಾರಿಗೆ ತನ್ನ ಆದಾಯ ಮಾರ್ಗದರ್ಶನವನ್ನು ಇನ್ಫೋಸಿಸ್ ಕಡಿತಗೊಳಿಸಿದೆ.  ಬೆಂಗಳೂರು ಮೂಲದ ಸಂಸ್ಥೆ ಇದೇ ಅವಧಿಯಲ್ಲಿ 17,310 ಕೋಟಿ ರೂ.ಗಳ ಆದಾಯ ಗಳಿಸಿದ್ದು, ಶೇಕಡ 10.7ರಷ್ಟು ಬೆಳವಣಿಗೆ ಸಾಧಿಸಿದೆ. 2015ರ ಜುಲೈ-ಸೆಪ್ಟೆಂಬರ್‍ನಲ್ಲಿ ಈ ವರಮಾನ 15,635 ಕೋಟಿ ರೂ.ಗಳಷ್ಟಿತ್ತು. ಈ ಆದಾಯವು ನಿರಂತರ ಕರೆನ್ಸಿಯಲ್ಲಿ ಶೇ.8-9ರಷ್ಟು ಪ್ರಗತಿ ಕಾಣುವ ನಿರೀಕ್ಷೆ ಇದೆ.

► Follow us on –  Facebook / Twitter  / Google+

Facebook Comments

Sri Raghav

Admin