ಇನ್ಸುರೆನ್ಸ್ ಹಣ ಪಡೆಯಲು ಟ್ರ್ಯಾಕ್ಟರ್‍ಗೆ ಬೆಂಕಿ ಹಚ್ಚಿದ ಮಾಲೀಕನ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

firing--in--car

ಚೇಳೂರು,ಅ.21-ಮಾಡಿದ್ದ ಸಾಲ ತೀರಿಸಲಾಗದೆ ಇನ್ಸುರೆನ್ಸ್ ಹಣ ಪಡೆಯಲೆಂದು ತಾನೇ ಟ್ರ್ಯಾಕ್ಟರ್‍ಗೆ ಬೆಂಕಿ ಹಚ್ಚಿ ನಾಟಕವಾಡಿದ್ದ ಮಾಲೀಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಗುಬ್ಬಿ ತಾಲ್ಲೂಕಿನ ಹೊಸಕೆರೆ ಗ್ರಾಮದ ರಾಜುಬಾಬು ಎಂಬುವರು ಟ್ರ್ಯಾಕ್ಟರ್‍ನ್ನು ಖರೀದಿಸಿದ್ದರು. ಟ್ರ್ಯಾಕ್ಟರ್ ಪಡೆಯಲು ಹಾಗೂ ಬೆಳೆಗಾಗಿ ರಾಜುಬಾಬು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಈ ನಡುವೆ ತನ್ನ ಜಮೀನಿನಲ್ಲಿ ಟ್ರ್ಯಾಕ್ಟರ್ ನಿಲ್ಲಿಸಿದ್ದಾಗ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆಂದು ಚೇಳೂರು ಠಾಣೆಗೆ ದೂರು ನೀಡಿದ್ದರು. ದೂರಿನಲ್ಲಿ ಅನುಮಾನ ವ್ಯಕ್ತಪಡಿಸಿದ್ದ ಇಬ್ಬರನ್ನು ಇನ್‍ಸ್ಪೆಕ್ಟರ್ ನದಾಫ್ ಅವರು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಈ ಕೃತ್ಯ ಟ್ರ್ಯಾಕ್ಟರ್ ಮಾಲೀಕ ರಾಜುಬಾಬು ಅವರೇ ಮಾಡಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ತಕ್ಷಣ ರಾಜುಬಾಬು ಅವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ತಾನು 4.18 ಲಕ್ಷ ರೂ. ಸಾಲ ಮಾಡಿದ್ದು, ಸಾಲ ತೀರಿಸಲಾಗದೆ ಇನ್ಸುರೆನ್ಸ್ ಹಣ ಬರಬಹುದೆಂದು ನಾನೇ ಟ್ರ್ಯಾಕ್ಟರ್‍ಗೆ ಬೆಂಕಿ ಹಚ್ಚಿದುದ್ದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಪೊಲೀಸರು ಈತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಘಟನೆ ನಡೆದ ಎರಡೇ ದಿನದಲ್ಲಿ ಈ ಪ್ರಕರಣ ಬೆಳಕಿಗೆ ತರುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin