ಇನ್ಸ್ಟಾಗ್ರಾಮ್’ನಲ್ಲಿ ಪಿಗ್ಗಿ ಹಾಕಿದ ಹೊಸ ಫ್ರೆಂಡ್ ಫೋಟೋ ..!

ಈ ಸುದ್ದಿಯನ್ನು ಶೇರ್ ಮಾಡಿ

Priyanka-02ಬಾಲಿವುಡ್ ತಾರೆಯರಾದ ಅನುಷ್ಕಾ ಶರ್ಮ, ಸಿದ್ದಾರ್ಥ ಮಲ್ಹೋತ್ರಾ, ಸಲ್ಮಾನ್ ಖಾನ್, ಅಲಿಯಾ ಭಟ್, ಕರಣ್ ಜೋಹರ್ ಇವರಿಗೆ ಪ್ರಾಣಿಗಳೆಂದರೆ ಪಂಚಪ್ರಾಣ. ಈಗ ಆ ಸಾಲಿಗೆ ಪ್ರಿಯಾಂಕ ಚೋಪ್ರಾ ಯಾನೆ ಪಿಗ್ಗಿ ಸೇರ್ಪಡೆಯಾಗಿದ್ದಾಳೆ. ಅಮೆರಿಕದ ಕ್ವಾಂಟಿಕೋ ಟೆಲಿವಿಷನ್ ಸೀರಿಯಲ್ ನಟಿ ಪಿಗ್ಗಿ ಇತ್ತೀಚೆಗೆ ಮುದ್ದಾದ ನಾಯಿಮರಿಯೊಂದನ್ನು ದತ್ತು ಸ್ವೀಕರಿಸಿದ್ದಾಳೆ. ಹೊಸ ಪ್ರಾಣಿಯ ಒಡತಿಯರಂತೆ ಈಕೆಯೂ ಕೂಡ ತನ್ನ ಹೊಸ ಫ್ರೆಂಡ್ ಪೋಟೊಗಳನ್ನು ಟ್ವೀಟರ್‍ನಲ್ಲಿ ಪೋಸ್ಟ್ ಮಾಡಿದ್ದಾಳೆ.

ಪಿಗ್ಗಿಯ ಹೊಸ ಫ್ರೆಂಡ್ ಹೆಸರು ಡಯಾನಾ. ಈ ಮುದ್ದು ಮರಿಯೊಂದಿಗೆ ಪಿಗ್ಗಿ ಆತ್ಮೀಯ ಒಡನಾಟ ಹೊಂದಿದ್ದರೆ, ಡಯಾನಾ ಕೂಡ ಪಿಗ್ಗಿ ಹಿಂದೆ ಬಾಲ ಆಡಿಸುತ್ತಾ ಸುತ್ತುತ್ತಾ ತನ್ನ ಪ್ರೀತಿಯನ್ನು ತೋರಿಸುತ್ತಿದೆ. ನ್ಯೂಯಾರ್ಕ್ ಪಿಗ್ಗಿ ಮನೆಯಲ್ಲಿರುವ ಝೂಮರ್ ಎಂಬ ಮಾತನಾಡುವ ರೋಬೊ ಜೊತೆಯೂ ಡಯಾನಾ ಚಿನ್ನಾಟವಾಡುತ್ತಾ ಗಮನ ಸೆಳೆಯುತ್ತಿದ್ದಾಳೆ. ಶ್ವಾನ ಪೋಷಣೆಯ ತನ್ನ ಬಯಕೆಯನ್ನು ಪಿಸಿ ವ್ಯಕ್ತಪಡಿಸುತ್ತಿದ್ದಂತೆ ಅನೇಕ ನಾಯಿ ಮರಿಗಳನ್ನು ಆಕೆಗೆ ತೋರಿಸಲಾಯಿತು. ಅದರಲ್ಲಿ ಈ ಮರಿಗೆ ಆಕೆಗೆ ಬಹುವಾಗಿ ಇಷ್ಟವಾಯಿತಂತೆ. ಈಗ ಪ್ರಿಯಾಂಕ-ಡಯಾನಾ ಬೆಸ್ಟ್ ಫ್ರೆಂಡ್ ಆಗಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin