ಇನ್ಸ್‍ಪೆಕ್ಟರ್ ಮಂಜುನಾಥ್ ಅಮಾನತು

ಈ ಸುದ್ದಿಯನ್ನು ಶೇರ್ ಮಾಡಿ

inspector
ಚಿಂತಾಮಣಿ, ನ.9-ಟಿಪ್ಪು ಜಯಂತಿ ಆಚರಣೆ ಸಂಬಂಧ ಕರ್ತವ್ಯಲೋಪ ಎಸಗಿದ ಹಾಗೂ ಹಿರಿಯ ಪೊಲೀಸ್ ಆಧಿಕಾರಿಯ ಜೊತೆಯಲ್ಲಿ ಮಾತನಾಡುವಾಗ ಅಸಡ್ಡೆ ಮತ್ತು ಉದ್ದಟತನ ಪ್ರದರ್ಶನ ಮಾಡಿದ ಹಿನ್ನೆಲೆಯಲ್ಲಿ ನಗರಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಮಂಜುನಾಥ್ ರವರನ್ನು ಕೇಂದ್ರ ವಲಯದ ಐಜಿಪಿ ಸೀಮಂತ್‍ಕುಮಾರ್ ಸಿಂಗ್ ಅಮಾನತ್ತು ಮಾಡಿ ಅದೇಶ ಹೊರಡಿಸಿದ್ದಾರೆ. ನಗರದ ಅತಿ ಸೂಕ್ಷ್ಮ ಪ್ರದೇಶವಾದ ಅಜಾದಚೌಕದಲ್ಲಿ ಟಿಪ್ಪು ಜಯಂತಿ ಸಮಾರಂಭವನ್ನು ನಡೆಸಲು ಸಭೆಯಲ್ಲಿ ತೀರ್ಮಾನಿಸಿದಾಗ ಅತಿ ಸೂಕ್ಷ್ಮ ಪ್ರದೇಶವೆಂದು ತಿಳಿದಿದ್ದರೂ ಅದನ್ನು ಸಭೆಯಲ್ಲಿ ಪ್ರಸ್ತಾಪ ಮಾಡದೆ ನಿರ್ಲಕ್ಷ್ಯ ತೋರಿದ್ದರು.

ನ.5 ರಂದು ನಡೆದ ಎರಡನೇ ಸಭೆಯಲ್ಲಿಯೂ ಮೆರವಣಿಗೆ ಮತ್ತು ಅಜಾದ ಚೌಕದಲ್ಲಿ ಜಯಂತಿ ಸಭೆ ನಡೆಸದಂತೆ ಸೂಚಿಸುವ ಬಗ್ಗೆ ನಗರಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಮಂಜುನಾಥ್ ನಿರ್ಲಕ್ಷ್ಯ ತೋರಿದ್ದರು. ಅಲ್ಲದೆ ಈ ಕುರಿತು ಹಿರಿಯ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಅಸಡ್ಡೆ ಉತ್ತರ ನೀಡಿದ್ದರೆಂದು ಹಾಗಾಗಿ ಮಂಜುನಾಥ್‍ರನ್ನು ಅಮಾನತುಪಡಿಸಲಾಗಿದೆ.

ಕಿರುಕುಳ ಅರೋಪ:-

ಅಮಾನತ್ತು ಅದೇಶ ಹೊರ ಬೀಳುತ್ತಿದ್ದಂತೆ ನಗರಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಮಂಜುನಾಥ್ ಇಂದು ಬೆಳಿಗ್ಗೆ ತಮ್ಮ ಡೈರಿಯಲ್ಲಿ ತನ್ನಗೆ ಐಜಿಪಿ ಮತ್ತು ಡಿವೈಎಸ್‍ಪಿರವರ ಕಿರುಕುಳದ ಹಿನ್ನೆಲೆಯಲ್ಲಿ ಮಾನಸಿಕ ನೆಮ್ಮದಿ ಹಾಳಾಗಿದ್ದು ಇಂದಿನಿಂದ ದೀರ್ಘಕಾಲ ರಜೆ ಹಾಕಿ ತೆರಳುತ್ತಿರುವುದಾಗಿ ಡೈರಿಯಲ್ಲಿ ನಮೂದಿಸಿ ಹೋಗಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin