ಇಫ್ತಿಯಾರ್ ಕೂಟದಲ್ಲಿ ವಿಷಾಹಾರ ಸೇವಿಸಿದ 175 ಮಂದಿ ಅಸ್ವಸ್ಥ
ಬಹ್ರೈಚ್, ಜೂ.6, ರಂಜಾನ್ ಪ್ರಯುಕ್ತ ಏರ್ಪಡಿಸಿದ್ದ ಇಫ್ತಿಯಾರ್ ಕೂಟದಲ್ಲಿ ವಿಷಪೂರಿತ ಆಹಾರ ಸೇವಿಸಿ 175 ಮಂದಿ ಅಸ್ವಸ್ಥರಾಗಿರುವ ಘಟನೆ ಉತ್ತರಪ್ರದೇಶದ ಹರ್ವತಂಡ್ ಗ್ರಾಮದಲ್ಲಿ ನಡೆದಿದೆ. ಹುಜ್ಪುರ್ ವ್ಯಾಪ್ತಿಯ ಮದ್ರಸ್ಸಾದಲ್ಲಿ ನಿನ್ನೆ ರಾತ್ರಿ ನಡೆದ ಇಫ್ತಿಯಾರ್ ಕೂಟದಲ್ಲಿ ನೂರಾರು ಮಂದಿ ಭಾಗವಹಿಸಿ ಆಹಾರ ಸೇವಿಸಿದ್ದರು. ಊಟದ ಬಳಿಕ ಕೆಲವೆ ನಿಮಿಷದಲ್ಲಿ ಎಲ್ಲರೂ ವಾಂತಿ ಮಾಡಲು ಪ್ರಾರಂಭಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಷಪೂರಿತ ಆಹಾರ ಸೇವಿಸಿ ಅಸ್ವಸ್ಥರಾಗಿದ್ದ 175 ಮಂದಿಯನ್ನು ಆಸ್ಪತ್ರಗೆ ದಾಖಲಿಸಿದ್ದು, ಕೆಲವರು ಈಗಾಗಲೆ ಚಿಕಿತ್ಸೆ ಪಡೆದು ಮನೆಗೆ ಹಿಂತಿರುಗಿದ್ದಾರೆ. ಇನ್ನುಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ವಿಷಪೂರಿತ ಆಹಾರ ಸೇವೆನೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆಹಾರದ ಸ್ಯಾಂಪಲ್ ಅನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS