ಇಬ್ಬರು ಉಗ್ರರ ಬೇಟೆಗಾಗಿ ಹೆಲಿಕಾಪ್ಟರ್’ಗಳು ಮತ್ತು 1,000 ಯೋಧರ ನಿಯೋಜನೆ..!

ಈ ಸುದ್ದಿಯನ್ನು ಶೇರ್ ಮಾಡಿ

Millitants--01

ಕೊಕ್ರಾಜಾರ್(ಅಸ್ಸಾಂ), ಏ.24-ಈಶಾನ್ಯ ರಾಜ್ಯ ಅಸ್ಸಾಂನ ಇಬ್ಬರು ಕುಖ್ಯಾತ ಉಗ್ರಗಾಮಿಗಳ ಬೇಟೆಗಾಗಿ ಸೇನೆ ವ್ಯಾಪಕ ಮಾನವ ಬೇಟೆ ಅರಂಭಿಸಿವೆ. ಚಿರಾಂಗ್ ಜಿಲ್ಲೆ ಮತ್ತು ಮಾನಸ್ ಮೀಸಲು ಅರಣ್ಯ ಪ್ರದೇಶದ ನ್ಯಾಷನಲ್ ಡೆಮೊಕ್ರಾಟಿಕ್ ಫ್ರಂಟ್ ಆಫ್ ಬೋಡೊಲ್ಯಾಂಡ್(ಎಸ್) ಉಗ್ರಗಾಮಿ ಸಂಘಟನೆಯ ಇಬ್ಬರು ಹಿರಿಯ ನಾಯಕರ ಪತ್ತೆಗಾಗಿ ಹೆಲಿಕಾಪ್ಟರ್‍ಗಳು ಮತ್ತು 1,000ಕ್ಕೂ ಹೆಚ್ಚು ಯೋಧರ ಹಾಗೂ ಶ್ವಾನದಳಗಳನ್ನು ನಿಯೋಗಿಸಲಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಎನ್‍ಡಿಎಫ್‍ಬಿ(ಎಸ್)ನ ಕುಖ್ಯಾತ ಉಗ್ರರಾದ ಜಿ. ಬಿಡೈ ಮತ್ತು ಬಥಾ ಅವರು ಚಿರಾಂಗ್ ಜಿಲ್ಲೆ ಮತ್ತು ಮಾನಸ್ ಮೀಸಲು ಅರಣ್ಯ ಪ್ರದೇಶದಲ್ಲಿ ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಇಂಡೋ-ಭೂತಾನ್ ಗಡಿಯಲ್ಲಿ ಭಾನುವಾರದಿಂದ ಜಂಟಿ ಭದ್ರತಾ ಪಡೆಗಳು ಶೋಧ ಮುಂದುವರಿಸಿವೆ.
ಈ ಇಬ್ಬರು ಉಗ್ರರು ಹಲವಾರು ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ಅಗತ್ಯವಾಗಿ ಬೇಕಾಗಿದ್ದಾರೆ.

Facebook Comments

Sri Raghav

Admin