ಇಬ್ಬರು ಜೆಡಿಎಸ್ ಕಾರ್ಯಕರ್ತರ ಹತ್ಯೆ ಪ್ರಕರಣ : ಆರೋಪಿಗಳಿಗೆ ಜಾಮೀನು

ಈ ಸುದ್ದಿಯನ್ನು ಶೇರ್ ಮಾಡಿ

ಮದ್ದೂರು, ಮಾ.4- ತಾಲೂಕಿನ ತೊಪ್ಪನಹಳ್ಳಿ ಗ್ರಾಮದಲ್ಲಿ ನಡೆದ ಇಬ್ಬರು ಜೆಡಿಎಸ್ ಕಾರ್ಯಕರ್ತರ ಹತ್ಯೆ ಪ್ರಕರಣ ಸಂಬಂಧ ಕೆ.ಹೊನ್ನಲಗೆರೆ ಗ್ರಾಪಂ ಅಧ್ಯಕ್ಷೆ ಶೋಭಾ ಸೇರಿದಂತೆ ಹದಿಮೂರು ಜನರಿಗೆ ಐದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.ಪ್ರಕರಣದ ಪ್ರಮುಖ ಆರೋಪಿಗಳಾದ ಸಿ.ಎಸ್.ಮುತ್ತುರಾಜು, ರಾಮಲಿಂಗು, ಜಗದೀಶ್, ಸಿ.ಡಿ.ದೀಪಕ್, ಸಿ.ಡಿ.ಯೋಗೇಶ್ ಹಾಗೂ ಟಿ.ಡಿ.ಸ್ವಾಮಿ ಇವರನ್ನು ಹೊರತುಪಡಿಸಿ ಹದಿಮೂರು ಮಂದಿ ಆರೋಪಿಗಳಿಗೆ ನ್ಯಾಯಾಧೀಶ ಸೈಯದ್ ರೆಹಮಾನ್ ಜಾಮೀನು ಮಂಜೂರು ಮಾಡಿದ್ದಾರೆ.ಆರೋಪಿಗಳಾದ ಸಿ.ಡಿ.ಶಿವರಾಜು, ಪಿ.ಕೆ.ಶಿವಣ್ಣ, ಪಿ.ಕೆ.ದೇವರಾಜು, ಟಿ.ಎಸ್.ಹೇಮಂತ್‍ಕುಮಾರ್, ಪಿ.ಕೆ.ಲಿಂಗಯ್ಯ, ಪಿ.ಕೆ.ಶಿವರಾಮು, ಗ್ರಾಪಂ ಸದಸ್ಯ ಸಿ.ಎಂ.ಪುಟ್ಟಸ್ವಾಮಿ, ಕುಮಾರ, ಮುತ್ತ, ಪಿ.ಎನ್.ಶಿವು ಹಾಗೂ ಪ್ರಸನ್ನ ಇವರುಗಳಿಗೆ ಜಾಮೀನು ದೊರಕಿದೆ.

ಪ್ರಕರಣದಲ್ಲಿ ಗ್ರಾಪಂ ಅಧ್ಯಕ್ಷೆ ಶೋಭಾ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ಒಂಬತ್ತನೇ ಆರೋಪಿ ಪ್ರತಾಪ್‍ಗೆ ಜಾಮೀನು ದೊರಕಿತ್ತಾದರೂ ಈತನ ತಂದೆ-ತಾಯಿಗಳು ಅಫಿಡೆವಿಟ್ ಸಹಿ ಹಾಕಿಲ್ಲದ ಕಾರಣ ಬಿಡುಗಡೆಯ ಭಾಗ್ಯ ಸಿಕ್ಕಿರಲಿಲ್ಲ. ಹದಿನಾರನೇ ಆರೋಪಿ ಶಿವಕುಮಾರ್‍ಗೆ ಫೆ.9ರಂದೇ ಜಾಮೀನು ಮಂಜೂರಾಗಿದೆ. ಜಾಮೀನು ದೊರಕಿರುವ ಎಲ್ಲಾ ಆರೋಪಿಗಳು ವಾರಕ್ಕೊಮ್ಮೆ ಮದ್ದೂರು ಠಾಣೆಗೆ ಹಾಜರಾಗಿ ಠಾಣಾಧಿಕಾರಿ ಎದುರು ಸಹಿ ಹಾಕಬೇಕು. ಸಾಕ್ಷ್ಯಾಧಾರ ನಾಶಪಡಿಸುವ ಯತ್ನ ಮಾಡಬಾರದು. ಅನುಮತಿ ಇಲ್ಲದೆ ಪರ ಊರುಗಳಿಗೆ ಹೋಗುವಂತಿಲ್ಲ ಎಂಬ ಷರತ್ತು ವಿಧಿಸಿ ಜಾಮೀನು ನೀಡಲಾಗಿದೆ.

ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಕಳೆದ ವರ್ಷ ಡಿ.25ರಂದು ತೊಪ್ಪನಹಳ್ಳಿಯಲ್ಲಿ ಜೆಡಿಎಸ್ ಕಾರ್ಯಕರ್ತರಾದ ನಂದೀಶ್ ಹಾಗೂ ಮುತ್ತುರಾಜ್ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಈ ಸಂಬಂಧ ಮದ್ದೂರು ಪೊಲೀಸರು 19 ಮಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು. ನಂತರ ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸಿದ್ದು ಅಧಿಕಾರಿಗಳು ವಿಚಾರಣೆ ಮುಂದುವರೆಸಿದ್ದಾರೆ.ಆರೋಪಿಗಳ ಪರವಾಗಿ ವಕೀಲರಾದ ಸತ್ಯನಾರಾಯಣ ಚಲಕೆ ಮತ್ತು ಟಿ.ಎಸ್.ಸತ್ಯಾನಂದ ವಾದ ಮಂಡಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin