ಇಬ್ಬರು ಪುತ್ರಿಯರಿಗೆ ಗುಂಡಿಟ್ಟು ಕೊಂದು ಆತ್ಮಹತ್ಯೆಗೆ ಶರಣಾದ ರೈತ

ಈ ಸುದ್ದಿಯನ್ನು ಶೇರ್ ಮಾಡಿ

Gun-Shoot

ಮುಜಾಫರ್‍ನಗರ್, ಜ.7-ರೈತನೊಬ್ಬ ತನ್ನ ಇಬ್ಬರು ಅಪ್ರಾಪ್ತ ವಯಸ್ಸಿನ ಪುತ್ರಿಯರನ್ನು ಗುಂಡಿಟ್ಟು ಕೊಂದು, ಪತ್ನಿಯನ್ನು ಗಂಭೀರವಾಗಿ ಗಾಯಗೊಳಿಸ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಉತ್ತರಪ್ರದೇಶದ ಮುಜಾಫರ್‍ನಗರ ಜಿಲ್ಲೆಯ ಮಾಧೇರಿ ಗ್ರಾಮದಲ್ಲಿ ನಡೆದಿದೆ. ಮನೆಯಿಂದ ಸ್ವಲ್ಪ ದೂರದಲ್ಲಿ ಆಟವಾಡುತ್ತಿದ್ದ 10 ವರ್ಷದ ಆತನ ಪುತ್ರ ಪಾರಾಗಿದ್ದಾನೆ.  ಕೌಟುಂಬಿಕ ಕಾರಣ ಮತ್ತು ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಕೆಲಕಾಲದಿಂದ ಒತ್ತಡಕ್ಕೆ ಸಿಲುಕಿ ಖಿನ್ನತೆಗೆ ಒಳಗಾಗಿದ್ದ 42 ವರ್ಷದ ರೈತ ಜೈವೀರ್ ಸಿಂಗ್ ಈ ಕೃತ್ಯ ಎಸಗಿ ತಾನೂ ಸಾವಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ ಹೊಲದಿಂದ ಹಿಂದಿರುಗಿದ ಸಿಂಗ್ ತನ್ನ ಪುತ್ರಿಯರಾದ ಸುವೇತಾ (16) ಮತ್ತು ಪ್ರಿಯಾಂಶಿ (9) ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ. ನಂತರ ಪತ್ನಿ ಮೀನೂ ಮೇಲೆ ಗುಂಡು ಹಾರಿಸಿ ತೀವ್ರ ಗಾಯಗೊಳಿಸಿದ. ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ. ಈ ಘಟನೆ ನಡೆದಾಗ ಆತನ 10 ವರ್ಷ ಮಗ ಕಿಷನ್ ಮನೆಯಿಂದ ಸ್ವಲ್ಪ ದೂರದಲ್ಲಿ ಆಟವಾಡುತ್ತಿದ್ದ. ಆದ್ದರಿಂದ ಆತ ಬದುಕುಳಿದ.   ಗಂಭೀರವಾಗಿ ಗಾಯಗೊಂಡಿರು ಮೀನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಈ ಘಟನೆ ಬಗ್ಗೆ ತನಿಖೆ ಮುಂದುವರಿದಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin