ಇಬ್ಬರು ಮನೆಗಳ್ಳರ ಬಂಧನ : 70 ಸಾವಿರ ಮೌಲ್ಯದ ಚಿನ್ನಾಭರಣ ವಶ

ಈ ಸುದ್ದಿಯನ್ನು ಶೇರ್ ಮಾಡಿ

ದಾವಣಗೆರೆ,ಫೆ.15-ಮನೆಗಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಡಾವಣೆ ಪೊಲೀಸರು ಬಂಧಿಸಿ 70 ಸಾವಿರ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಹರಿಹರ ತಾಲ್ಲೂಕು ಮಲೆಬೆನ್ನೂರಿನ ನಿವಾಸಿ ನಾಗರಾಜ್, ಬ್ಯಾಡಗಿ ತಾಲ್ಲೂಕು ಕದರಮಂಡಲಗಿ ಗ್ರಾಮದ ನಿವಾಸಿ ಸಿದ್ದು ಉದ್ದೀಮಿ ಬಂಧಿತ ಆರೋಪಿಗಳು. ನಾಗರಾಜ್ ಮಂಡಕ್ಕಿಬಟ್ಟಿಯಲ್ಲಿ ಕೆಲಸ ಮಾಡುತ್ತಿದ್ದು , ಸಿದ್ದು ಕಂಪ್ಯೂಟರ್ ಕೆಲಸಗಾರನಾಗಿದ್ದು , ಇಬ್ಬರು ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನದಲ್ಲಿ ನಿಜಲಿಂಗಪ್ಪ ಬಡಾವಣೆಯ ಶಾರದಾ ನೌಕಾಬಂದಿಯ ಬಳಿ ತಿರುಗಾಡುತ್ತಿದ್ದಾಗ, ಗಸ್ತಿನಲ್ಲಿದ್ದ ಅಪರಾಧ ವಿಭಾಗದ ಸಬ್‍ಇನ್‍ಸ್ಪೆಕ್ಟರ್ ಬಿ.ಎಂ.ಭವ್ಯ ಮತ್ತು ಸಿಬ್ಬಂದಿ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಕಳವು ಮಾಡಿದ್ದ ಬೆಳ್ಳಿ, ಬಂಗಾರ ಮಾರಾಟ ಮಾಡಲು ಬಂದಿರುವುದಾಗಿ ತಿಳಿಸಿದ್ದಾರೆ. ಈ ಹಿಂದೆ 8-10 ತಿಂಗಳ ಹಿಂದೆಯೂ ಹಾವೇರಿ ಜಿಲ್ಲೆ ಹಂಸಭಾವಿ ಠಾಣೆ ವ್ಯಾಪ್ತಿಯ ಮನೆಗಳಲ್ಲಿ ಬೆಳ್ಳಿ , ಬಂಗಾರ ಕದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ. ಬಂಧಿತರಿಂದ 70 ಸಾವಿರ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin