ಇಬ್ಬರು ಮಹಿಳೆ ಸೇರಿ 7 ಮಂದಿ ಡಕಾಯಿತರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

madhugiri-7 people arrest

ಮಧುಗಿರಿ,ಆ.26-ಅಂತರಾಜ್ಯ ಸರಗಳ್ಳರನ್ನು ಮಧುಗಿರಿ ಪೊಲೀಸರು ಬಂದಿಸಿ ಅವರಿಂದ ಸುಮಾರು 10 ಲಕ್ಷಕ್ಕೂ ಹೆಚ್ಚಿನ ಮೊತ್ತದ ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲಿಸ್ ವರಿಷ್ಟಾಧಿಕಾರಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.ಪಟ್ಟಣದ ಡಿವೈಎಸ್ಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಆ.16 ರಂದು ಬಡವನಹಳ್ಳಿ ಶ್ರೀ ಶನಿಮಹಾತ್ಮ ಸ್ವಾಮಿ ದೇವಸ್ಥಾನಕ್ಕೆ ಬಂದಿದ್ದ, ಚಿಕ್ಕ ಮಾರಕ್ಕನವರ ಕೊರಳಿನಲ್ಲಿದ್ದ ಸರವನ್ನು ಕದಿಯುವ ವೇಳೆ ಸಾರ್ವಜನಿಕರಿಂದ ಥಳಿತಕ್ಕೂಳಗಾದ ಡಕಾಯಿತನೊಬ್ಬನನ್ನು ಹಿಡಿದ ಪೊಲೀಸರು ಮಧುಗಿರಿ, ಪಾವಗಡ ತಾಲೂಕಿನಲ್ಲಿ ವರದಿಯಾದ ಕಳ್ಳರ ಜಾಡು ಹಿಡಿದು ಹೊರಟು ಉಳಿದ 6 ಮಂದಿ ಡಕಾಯಿತರನ್ನು ತಾಲೂಕಿನ ಚಿನ್ನೇನಹಳ್ಳಿಯ ಸಮೀಪ ಅನುಮಾನಾಸ್ಪದವಾಗಿ ಟಾಟಾ ಸುಮೋ ವಾಹನದಲ್ಲಿ ತಿರುಗಾಡುವಾಗ ಸೆರೆ ಹಿಡಿದಿದ್ದಾರೆ.

ಡಕಾಯಿತರಲ್ಲಿ ಇಬ್ಬರು ಮಹಿಳೆಯರು ಸೇರಿದ್ದು, ಪೇಮಕುಮಾರ(25), ಲಕ್ಷ್ಮಮ್ಮ(58), ಪ್ರಿಯ(24) ತಮಿಳುನಾಡಿನವರಾಗಿದ್ದು, ಉಳಿದವರು ಬೆಂಗಳೂರಿನ ಶಿವ(28), ಮೈಸೂರು ಜಿಲ್ಲೆಯ ಹುಣಸೂರಿನ ಗಂಗಣ್ಣ(35), ಪ್ರೇಮಗಂಗಣ್ಣ(25),ಹರೀಶ್(30) ಇವರು ಬಂಧಿತರು. ಇವರು ನೀಡಿದ ಸುಳಿವಿನ ಮೇರೆಗೆ ಹಲವು ಭಾಗಗಳಲ್ಲಿ ಕದ್ದಿದ್ದ ಒಟ್ಟು 7 ಮಾಂಗಲ್ಯ ಸರವನ್ನು ಹಾಸನ ಮತ್ತು ತಮಿಳುನಾಡಿನ ಹೊಸೂರಿನ ಬಾಡಿಗೆ ಮನೆಯಲ್ಲಿ ವಶಪಡಿಸಿಕೊಂಡಿದ್ದು, ಇದರ ಜೊತೆ ಟಾಟಾ ಸುಮೊವನ್ನು ವಶಪಡಿಸಿಕೊಳ್ಳಲಾಗಿದೆ.   ಇವರು ಗ್ರಾಮದಲ್ಲಿ ನಡೆಯುವ ಜಾತ್ರೆ, ಸಂತೆ, ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಒಂಟಿ ಮಹಿಳೆಯ ಮೇಲೆ ಎರಗಿ ಸರಗಳ್ಳತನ ಮಾಡಿ ಹಾಗೂ ಅದೇ ಸ್ಥಳದಲ್ಲಿ ವಾಹನವನ್ನು ಕಳ್ಳತನ ಮಾಡಿ ಪೆಟ್ರೋಲ್ ಇರುವ ತನಕ ಬಳಸಿ ನಂತರ ಅಲ್ಲೇ ಬಿಟ್ಟು ಪರಾರಿಯಾಗುತ್ತಿದ್ದರು ಎಂದು ಅವರು ತಿಳಿಸಿದರು.ಸಾರ್ವಜನಿಕರು ಸಹ ಇಂತಹ ಕೃತ್ಯ ಮಾಡುವ ಡಕಾಯಿತರ ಬಗ್ಗೆ ತಿಳಿದುಕೊಂಡು ಅನುಮಾಸ್ಪದವಾಗಿ ಕಂಡರೆ ಕೂಡಲೆ ಸಮೀಪದ ಪೊಲಿಸ್ ಠಾಣೆಗೆ

 

ಅಥವಾ ನಂ. 100 ಕ್ಕೆ ಕರೆಮಾಡಬೇಕು ಎಂದು ಮನವಿ ಮಾಡಿದರು.ಎ.ಎಸ್ಪಿ ಮಂಜುನಾಥ್, ಡಿವೈಎಸ್ಪಿ ಕಲ್ಲೇಶಪ್ಪ, ನವರ ಮಾರ್ಗದರ್ಶನದಲ್ಲಿ ಅಪರಾದಿಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದ ಸಿಪಿಐ ಗಿರೀಶ್ ನಾಯ್ಕ್, ಪಿಎಸೈ ಗಳಾದ ಅಂಬರೀಷ್, ಹನುಮಂತರಾಯಪ್ಪ, ಪೇದೆಗಳಾದ ನಾರಾಯಣ್, ಬಸವರಾಜು, ಮೆಹಬೂಬ್ ಖಾನ್, ಮೋಹನ್, ಮಂಜುನಾಥ್, ನರಸಿಂಹರಾಜು, ಚಾಲಕರಾದ ರಂಗರಾಮಯ್ಯ, ಜಯರಾಮಯ್ಯ ರವರಿಗೆ ಇಲಾಖೆಯಿಂದ 5 ಸಾವಿರ ಬಹುಮಾನ ಹಾಗೂ ಪ್ರಶಂಸನಾ ಪತ್ರವನ್ನು ನೀಡಿ ಎಸ್.ಪಿ. ಕಾರ್ತಿಕ್ ರೆಡ್ಡಿ ಗೌರವಿಸಿದರು.
ಬಾಕ್ಸ್:
ಪಟ್ಟಣದಲ್ಲಿ ಅಪ್ರಾಪ್ತ ವಯಸ್ಸಿನ ಯುವಕರು ಹೆಚ್ಚಾಗಿ ವಾಹನಗಳನ್ನು ಅಡ್ಡಾ-ದಿಡ್ಡಿ ಓಡಾಡಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಇದಕ್ಕೆ ಮಕ್ಕಳ ಪೊಷಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಪಿ.ಯು.ಸಿ ಕಾಲೇಜಿಗೆ ವಿದ್ಯಾರ್ಥಿಗಳು ವಾಹನಗಳನ್ನು ತಂದಲ್ಲಿ ಸಂಬಂದಪಟ್ಟ ಕಾಲೇಜಿನ ಪ್ರಾಂಶುಪಾಲರಿಗೆ ನೋಟೀಸ್ ನೀಡಲು ಪಿ.ಎಸ್.ಐ ಗಿರೀಶ್ ನಾಯ್ಕ ರವರಿಗೆ ಸೂಚಿಸಿದರು.

 

► Follow us on –  Facebook / Twitter  / Google+

Facebook Comments

Sri Raghav

Admin