ಇಮ್ರಾನ್ ಖಾನ್ ಪರ ರಾಜೇಗೌಡ ಹೇಳಿಕೆಗೆ ಖಂಡನೆ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು,ಏ.14- ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರು ಪಾಕಿಸ್ತಾನದ ಪ್ರಧಾನಿಇಮ್ರಾನ್ ಖಾನ್ ಸಜ್ಜನ ಹಾಗೂ ಮೃದು ಸ್ವಭಾವದವರು ಎಂದು ಹೇಳಿರುವುದು ಖಂಡನೀಯ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಚ್.ಲೋಕೇಶ್ ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜೇಗೌಡ ಅವರ ಹೇಳಿಕೆ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಯೋಧರ ಬಗ್ಗೆ ಊಟಕ್ಕೆ ಇಲ್ಲದವರು ಸೈನ್ಯಕ್ಕೆ ಸೇರುತ್ತಾರೆ ಎಂಬ ಹೇಳಿಕೆಯು ಅಕ್ಷಮ್ಯ ಇಂತಹ ಹೇಳಿಕೆಗಳಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮನಸ್ಥಿತಿ ಎಂತಥದ್ದು ಎಂದು ತಿಳಿಯುತ್ತದೆ.

ಕೇವಲ ಹಿಂದು ದೇವಸ್ಥಾನಗಳು ಜೀಣೋದ್ಧಾರ ಮಾಡುತ್ತೇವೆ ಎಂಬ ಪಾಕಿಸ್ತಾನದ ಅಧ್ಯಕ್ಷರ ಹೇಳಿಕೆಗೆ ಅವರ ಬಗ್ಗೆ ಹೊಗಳಿ ಮಾತುಗಳನ್ನು ಆಡುವುದು ಎಷ್ಟು ಸರಿ. ವೈರಿ ರಾಷ್ಟ್ರ ಪಾಕಿಸ್ತಾನ ಎಂದಾದರೂ ಹೇಳಿದಂತೆ ಕೊಂಡಿದ್ದೇಯೇ ಎಂದು ಹೇಳಿದ ಅವರು, ನಿಜವಾಗಿಯೂ ಕಾಂಗ್ರೆಸ್ ಪಕ್ಷಕ್ಕೆ ದೇಶ ಪ್ರೇಮ ಇದ್ದರೆ ಟಿ.ಡಿ. ರಾಜೇಗೌಡ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದರು.

ಸಮರ್ಥನೆ: ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದುಗಳ 400 ದೇವಾಲಯಗಳನ್ನು ಜೀರ್ಣೋದ್ಧಾರ ಮಾಡುವ ವಿಚಾರದಲ್ಲಿ ಪಾಕ್ ಪ್ರಧಾನಿ ಸಜ್ಜನ ಎಂದು ಹೇಳಿದಕ್ಕೆ ತಮ್ಮನ್ನು ಗಡಿಪಾರು ಮಾಡಬೇಕೆಂದು ಬಿಜೆಪಿ ಅವರು ಹೇಳುತ್ತಿದ್ದಾರೆ. ಈ ರೀತಿ ಹೇಳಿಕೆ ಅಲ್ಪಸಂಖ್ಯಾತರ ಮತಗಳನ್ನು ಪಡೆಯಲು ಬಿಜೆಪಿ ಅವರ ಕುತಂತ್ರ ಎಂದು ಟಿ.ಡಿ.ರಾಜೇಗೌಡ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ತಿಳಿಸಿದರು.

ಸಮಾಜವನ್ನು ಒಡೆದು ರಾಜಕಾರಣ ಮಾಡುವ ಅವಶ್ಯಕತೆ ತಮಗ ಇಲ್ಲ ಸಣ್ಣ ವಿಚಾರ ದೊಡ್ಡದಾಗಿ ಮಾಡಿದ್ದಾರೆ. ಬಿಜೆಪಿಯಿಂದ ದೇಶಪ್ರೇಮ ಹೇಳಿಕೊಳ್ಳುವ ಅವಶ್ಯಕತೆ ಇಲ್ಲ, ಜನರ ಶ್ರಮದಿಂದಾಗಿ ನಾನು ಶಾಸಕನಾಗಿದ್ದೇನೆ ಎಂದು ರಾಜೇಗೌಡ ಅವರು ತಿರುಗೇಟು ನೀಡಿದ್ದಾರೆ.

Facebook Comments