ಇರಾಕ್ನಲ್ಲಿ ಐಎಸ್ ಉಗ್ರರ ಮಟ್ಟ ಹಾಕಲು ಬೆಂಬಲ ನೀಡುವುದಾಗಿ ಟ್ರಂಪ್ ಘೋಷಣೆ
ಈ ಸುದ್ದಿಯನ್ನು ಶೇರ್ ಮಾಡಿ
ವಾಷಿಂಗ್ಟನ್, ಮಾ.21-ಯುದ್ಧ ಪೀಡಿತ ಇರಾಕ್ನಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ಸದೆಬಡಿದು ಆ ದೇಶದಲ್ಲಿ ಸ್ಥಿರತೆ ಸ್ಥಾಪನೆಗಾಗಿ ಸಹಕಾರ ನೀಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭರವಸೆ ನೀಡಿದ್ದಾರೆ. ಶ್ವೇತಭವನದ ಕ್ಯಾಬಿನೆಟ್ ರೂಮ್ನಲ್ಲಿ ಇರಾಕ್ ಪ್ರಧಾನಮಂತ್ರಿ ಹೈದರ್ ಅಲ್-ಅಬಿದಿ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಈ ಹಿಂದೆ ಅಮೆರಿಕ ಅಧ್ಯಕ್ಷರಾಗಿದ್ದವರು, ಇರಾಕ್ಗೆ ಸೇನಾ ಪಡೆಗಳನ್ನು ಮೊದಲು ಕಳುಹಿಸಿ ಆನಂತರ ಹಿಂದಕ್ಕೆ ಕರೆಸಿಕೊಂಡ ನಿರ್ಧಾರವನ್ನು ಪ್ರಶ್ನಿಸಿದರು.
ಇರಾಕ್ನಲ್ಲಿ ಕಾರ್ಯಾಚರಣೆಗಾಗಿ ತೆರಳಿದ ಮೇಲೆ ಅದನ್ನು ಪೂರ್ಣವಾಗಿ ಕಾರ್ಯಗತಗೊಳಿಸಬೇಕಿತ್ತು. ಅರ್ಧದಲ್ಲೇ ಬಿಟ್ಟು ಬಂದಿದ್ದರಿಂದ ಅಲ್ಲಿ ಸಮಸ್ಯೆ ಸೃಷ್ಟಿಯಾಯಿತು ಎಂದು ಐಎಸ್ ಉಗ್ರರ ವಶದಲ್ಲಿದ್ದ ಮೊಸುಲ್ ನಗರವನ್ನು ಟ್ರಂಪ್ ಉದಾಹರಣೆಯಾಗಿ ಹೇಳಿದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments