ಇರಾಕ್‍ನ ತಿಕ್ರಿತ್‍ನಲ್ಲಿ ಆತ್ಮಹತ್ಯಾ ಬಾಂಬರ್‍ಗಳು ನಡೆಸಿದ ದಾಳಿಯಲ್ಲಿ 40ಕ್ಕೂ ಹೆಚ್ಚು ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ISIS-Bombing

ಬಾಗ್ದಾದ್, ಏ.6-ಇರಾಕ್‍ನ ತಿಕ್ರಿತ್‍ನಲ್ಲಿ ಆತ್ಮಹತ್ಯಾ ಬಾಂಬರ್‍ಗಳು ನಡೆಸಿದ ದಾಳಿಯಲ್ಲಿ 40ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ಮಧ್ಯ ತಿಕ್ರಿತ್‍ನಲ್ಲಿ ರಾತ್ರಿ ಮೂವರು ಉಗ್ರರು ಗುಂಡು ಹಾರಿಸಿ ದಾಳಿ ಆರಂಭಿಸಿದರು. ನಂತರ ಮನೆಗಳ ಒಳಗೆ ನುಸುಳಿ ತಮ್ಮನ್ನು ತಾವು ಸ್ಫೋಟಿಸಿಕೊಂಡರು ಎಂದು ಸೇನೆ ಮತ್ತು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡ ಇತರ 42 ಮಂದಿಯಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಯೊಬ್ಬರು ಹೇಳಿದ್ದಾರೆ. ಇದು ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರ ಕೈವಾಡ ಎಂದು ಶಂಕಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin