ಇರಾಕ್‍ನ ಮೊಸುಲ್ ಪಟ್ಟಣದ ಮೇಲೆ ಐಎಸ್ ಉಗ್ರರಿಂದ ಕ್ಲೋರಿನ್ ಅನಿಲ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ISIS-Attack-01

ಬಾಗ್ದಾದ್, ಏ.16- ಇರಾಕ್‍ನ ಮೊಸುಲ್ ಪಟ್ಟಣದ ಮೇಲೆ ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರರು ನಡೆಸಿದ ಕ್ಲೋರಿನ್ ಗ್ಯಾಸ್ ದಾಳಿಯಲ್ಲಿ ಅನೇಕರು ಸಾವನ್ನಪ್ಪಿದ್ದಾರೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.  ಇರಾಕ್‍ನ ಎರಡನೇ ಅತಿದೊಡ್ಡ ಪಟ್ಟಣ ಮೊಸುಲ್‍ನಿಂದ ಸೇನಾಪಡೆಗಳು ತನ್ನ ಉಗ್ರರನ್ನು ಬಡಿದೊಡಿಸಿದ್ದಕ್ಕೆ ಪ್ರತೀಕಾರವಾಗಿ ವಿಮೋಚನೆಗೊಂಡ ಸ್ಥಳಗಳಲ್ಲಿ ಐಎಸ್ ಈ ದಾಳಿ ನಡೆಸಿ ಸಾವು-ನೋವಿಗೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ. ಆದರೆ ಸಾವಿನ ಸಂಖ್ಯೆ ಬಗ್ಗೆ ನಿಖರ ಮಾಹಿತಿ ನೀಡಿಲ್ಲ.


ವಿಷಯುಕ್ತ ಕ್ಲೋರಿನ್ ತುಂಬಿದ್ದ ಬಾಂಬ್ ಒಂದನ್ನು ನಿನ್ನೆ ರಾತ್ರಿ ಅಲ್ ಅಬರ್ ಪ್ರದೇಶದ ಮೇಲೆ ಉಡಾಯಿಸಲಾಗಿದೆ. ಇದರಿಂದ ಕೆಲವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಏಳು ಮಂದಿ ಯೋಧರೂ ಸೇರಿದಂತೆ ಅಸ್ವಸ್ಥಗೊಂಡ ಅನೇಕರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin